ಎಮರ್ಜಿಂಗ್ ಏಷ್ಯಾಕಪ್: ಭಾರತ ಎ ತಂಡಕ್ಕೆ ಪಾಕಿಸ್ತಾನ ಎದುರು ರೋಚಕ ಜಯ

web asia
Published on

ಓಮನ್​: ನಾಯಕ ತಿಲಕ್​ ವರ್ಮ (44 ರನ್​, 35 ಎಸೆತ, 2 ಬೌಂಡರಿ, 2 ಸಿಕ್ಸರ್​) ಬಿರುಸಿನಾಟ ಮತ್ತು ಅಂಶುಲ್​ ಕಂಬೋಜ್​ (33ಕ್ಕೆ 3) ಬಿಗಿ ದಾಳಿ ನೆರವಿನಿಂದ ಭಾರತ ಎ ತಂಡ ಎಮರ್ಜಿಂಗ್​ ಏಷ್ಯಾಕಪ್​ ಟಿ20 ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ಎದುರು 7 ರನ್​ಗಳಿಂದ ರೋಚಕ ಗೆಲುವು ಸಾಧಿಸಿ ಶುಭಾರಂಭ ಕಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಭಾರತ ಎ ತಂಡ 8 ವಿಕೆಟ್​ಗೆ 183 ರನ್​ ಕಲೆಹಾಕಿತು. ಪ್ರತಿಯಾಗಿ ಪಾಕಿಸ್ತಾನ 7 ವಿಕೆಟ್​ಗೆ 176 ರನ್​ ಗಳಿಸಲಷ್ಟೇ ಶಕ್ತವಾಯಿತು.

ಭಾರತ ಎ: 8 ವಿಕೆಟ್​ಗೆ 183 (ಅಭಿಷೇಕ್​ 36, ಪ್ರಭ್​ಸಿಮ್ರನ್​ 36, ತಿಲಕ್​ 44, ನೇಹಾಲ್​ 25, ಬಡೋನಿ 2, ರಮಣ್​ದೀಪ್​ 17, ನಿಶಾಂತ್​ 6, ಸುಫಿಯಾನ್​ 28ಕ್ಕೆ 2). ಪಾಕಿಸ್ತಾನ: 7 ವಿಕೆಟ್​ಗೆ 176 (ಯಾಸಿರ್​ ಖಾನ್​ 33, ಮಿನ್ಹಾಸ್​ 41, ಸಮದ್​ 25, ಕಂಬೋಜ್​ 33ಕ್ಕೆ 3, ರಸಿಕ್​ ಸಲಾಂ 30ಕ್ಕೆ 2, ನಿಶಾಂತ್​ ಸಂಧು 15ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net