ಎಮರ್ಜಿಂಗ್​ ಏಷ್ಯಾಕಪ್​ ಟಿ20: ಭಾರತಕ್ಕೆ ಸತತ 2ನೇ ಜಯ

web asia
Published on

ಅಲ್​ ಅಮರತ್​: ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ಎ ತಂಡ ಎಮರ್ಜಿಂಗ್​ ಏಷ್ಯಾಕಪ್​ ಟಿ20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಸೋಮವಾರ ನಡೆದ ತನ್ನ 2ನೇ ಪಂದ್ಯದಲ್ಲಿ ತಿಲಕ್​ ವರ್ಮ ಸಾರಥ್ಯದ ಭಾರತ ಎ ತಂಡ ಯುಎಇ ವಿರುದ್ಧ 7 ವಿಕೆಟ್​ಗಳಿಂದ ಗೆಲುವು ಸಾಧಿಸಿತು. ಭಾರತ ಮೊದಲ ಪಂದ್ಯದಲ್ಲಿ ಪಾಕ್​ ಎದುರು ಗೆದ್ದಿತ್ತು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಯುಎಇ, ಭಾರತೀಯರ ಬಿಗಿ ದಾಳಿ ಎದುರು 16.5 ಓವರ್​ಗಳಲ್ಲಿ 107 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಅಭಿಷೇಕ್​ ಶರ್ಮ (58 ರನ್​, 24 ಎಸೆತ, 6 ಬೌಂಡರಿ, 4 ಸಿಕ್ಸರ್​) ಬಿರುಸಿನ ಅರ್ಧಶತಕದ ಬಲದಿಂದ ಭಾರತ 10.5 ಓವರ್​ಗಳಲ್ಲೇ 3 ವಿಕೆಟ್​ಗೆ 111 ರನ್​ ಗಳಿಸಿ ಜಯಿಸಿತು. ಈ ಮೂಲಕ ಭಾರತ ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಭಾರತ ಎ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬುಧವಾರ ಆತಿಥೇಯ ಓಮನ್​ ವಿರುದ್ಧ ಆಡಲಿದೆ.

ಯುಎಇ: 16.5 ಓವರ್​ಗಳಲ್ಲಿ 107 (ರಾಹುಲ್​ ಚೋಪ್ರಾ 50, ಬಸಿಲ್​ 22, ರಸಿಕ್​ 15ಕ್ಕೆ 3, ರಮಣ್​ದೀಪ್​ 7ಕ್ಕೆ 2, ಅಭಿಷೇಕ್​ 0ಗೆ 1, ಕಂಬೋಜ್​ 17ಕ್ಕೆ 1). ಭಾರತ ಎ: 10.5 ಓವರ್​ಗಳಲ್ಲಿ 3 ವಿಕೆಟ್​ಗೆ 111 (ಅಭಿಷೇಕ್​ ಶರ್ಮ 58, ತಿಲಕ್​ 21, ಬಡೋನಿ 12*, ಶಫಿ 32ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net