ಅಂತಿಮ ದಿನ ವಿಂಡೀಸ್ ಪ್ರತಿರೋಧದ ನಡುವೆ ಗಾಲೆ ಟೆಸ್ಟ್ ಗೆದ್ದ ಶ್ರೀಲಂಕಾ

sl vs wi web
Published on

ಗಾಲೆ: ಎನ್‌ಕ್ರುಮಾ ಬೋನರ್ (68*) ಮತ್ತು ಜೋಶ್ವಾ ಡ ಸಿಲ್ವ (54) ದಿಟ್ಟ ಪ್ರತಿರೋಧದ ನಡುವೆ ಶ್ರೀಲಂಕಾ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 187 ರನ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ದಿಮುತ್ ಕರುಣರತ್ನೆ ಪಡೆ 2 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

348 ರನ್ ಸವಾಲಿಗೆ ಪ್ರತಿಯಾಗಿ 6 ವಿಕೆಟ್‌ಗೆ 52 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ವಿಂಡೀಸ್ ಪರ ಬೋನರ್-ಜೋಶ್ವಾ ಜೋಡಿ ಶತಕದ ಜತೆಯಾಟವಾಡಿತು. ಬಳಿಕ ಚಹಾ ವಿರಾಮಕ್ಕೆ ಮುನ್ನ ವಿಂಡೀಸ್ ತಂಡವನ್ನು 160 ರನ್‌ಗೆ ಆಲೌಟ್ ಮಾಡುವ ಮೂಲಕ ಲಂಕಾ ಗೆಲುವು ಒಲಿಸಿಕೊಂಡಿತು. ಸ್ಪಿನ್ನರ್‌ಗಳಾದ ಲಸಿತ್ ಎಂಬುಲ್ಡೆನಿಯ (46ಕ್ಕೆ 5) ಮತ್ತು ರಮೇಶ್ ಮೆಂಡಿಸ್ (64ಕ್ಕೆ 4) ವಿಂಡೀಸ್‌ಗೆ ಕಡಿವಾಣ ಹಾಕಿದರು. ದಿಮುತ್ ಕರುಣರತ್ನೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2ನೇ ಹಾಗೂ ಅಂತಿಮ ಟೆಸ್ಟ್ ನವೆಂಬರ್ 29ರಿಂದ ಗಾಲೆಯಲ್ಲೇ ನಡೆಯಲಿದೆ.

ಶ್ರೀಲಂಕಾ: 386 ಮತ್ತು 4 ವಿಕೆಟ್‌ಗೆ 191 ಡಿಕ್ಲೇರ್; ವೆಸ್ಟ್ ಇಂಡೀಸ್: 230 ಮತ್ತು 160 (ಬೋನರ್ 68*, ಜೋಶ್ವಾ 54, ಕಾರ್ನ್‌ವಾಲ್ 13, ಎಂಬುಲ್ಡೆನಿಯ 46ಕ್ಕೆ 5, ರಮೇಶ್ ಮೆಂಡಿಸ್ 64ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net