

ನವದೆಹಲಿ: ಎಲ್ಲಿಸ್ ಪೆರ‌್ರಿ (40 ರನ್, 38 ಎಸೆತ, 5 ಬೌಂಡರಿ, 5 ಸಿಕ್ಸರ್ ಹಾಗೂ 15ಕ್ಕೆ 6 ವಿಕೆಟ್)ಆಲ್ರೌಂಡ್ ನಿರ್ವಹಣೆಯ ಬಲದಿಂದ ಆರ್‌ಸಿಬಿ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) ಎರಡನೇ ಆವೃತ್ತಿಯ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಸ್ಮತಿ ಮಂದನಾ ಬಳಗ ಮೂರನೇ ತಂಡವಾಗಿ ಪ್ಲೇಆ್ಗೇರಿದೆ. ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ರೇಸ್‌ನಿಂದ ಹೊರಬಿದ್ದಿವೆ
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭದ ಬಳಿಕ ಪೆರ‌್ರಿ ದಾಳಿಗೆ ನಲುಗಿ 19 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ನಾಯಕಿ ಸ್ಮತಿ ಮಂದನಾ (11) ಹಾಗೂ ಸೋಫಿ ಮೂಲಿನೆಕ್ಸ್ (9) ವಿಕೆಟ್ ಬೇಗನೇ ಕಳೆದುಕೊಂಡ ಆರ್‌ಸಿಬಿ ಆರಂಭಿಕ ಆಘಾತ ಎದುರಿಸಿತು. ಆಗ 4ನೇ ವಿಕೆಟ್‌ಗೆ ಜತೆಯಾದ ಎಲ್ಲಿಸ್ ಪೆರ‌್ರಿ ಹಾಗೂ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಚಾ ೋಷ್ (36*) ಜೋಡಿ 4ನೇ ವಿಕೆಟ್‌ಗೆ ಪೇರಿಸಿದ ** ರನ್‌ಗಳ ಬಲದಿಂದ ಅಂತಿಮವಾಗಿ 15 ಓವರ್‌ಗಳಲ್ಲಿ 3 ವಿಕೆಟ್‌ಗೆ 115 ರನ್‌ಗಳಿಸಿ ಪ್ಲೇಆ್ಗೆ ಲಗ್ಗೆಯಿಟ್ಟಿತು.
ಪೆರ‌್ರಿಗೆ ಐದು ವಿಕೆಟ್: ಯಸ್ತಿಕಾ ಭಾಟಿಯಾ ಗೈರಿನಲ್ಲಿ ಆರಂಭಿಕರಾಗಿ ಬಡ್ತಿ ಪಡೆದ ಸಜೀವನ್ ಸಜನಾ (30) ಹಾಗೂ ಹ್ಯಾಲೆ ಮ್ಯಾಥ್ಯೂಸ್ (26) ಮುಂಬೈಗೆ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 26 ಎಸೆತಗಳಲ್ಲಿ 43 ರನ್‌ಗಳಿಸಿದರು. ಇನಿಂಗ್ಸ್‌ನ 9ನೇ ಓವರ್‌ನಲ್ಲಿ ದಾಳಿಗಿಳಿದ ಎಲ್ಲಿಸ್ ಪೆರ‌್ರಿ, ಸತತ ಎಸೆತದಲ್ಲಿ ಸಜನಾ ಹಾಗೂ ನಾಯಕಿ ಹರ್ಮಾನಪ್ರೀತ್ ಕೌರ್ (0) ವಿಕೆಟ್ ಕಬಳಿಸಿ ಮುಂಬೈಗೆ ಕಡಿವಾಣ ಹೇರಿದರು. ನಂತರ ನ್ಯಾಟ್ ಸೀವರ್ ಬ್ರಂಟ್ (10), ಅಮೆಲಿಯಾ ಕೆರ್ (2) ಹಾಗೂ ಅಮನ್ ಜೋತ್ (4) ಹಾಗೂ ಪೂಜಾ ವಸಕರ್ (6) ವಿಕೆಟ್ ಪಡೆದ ಎಲ್ಲಿಸ್ ಪೆರ‌್ರಿ ಟೂರ್ನಿಯಲ್ಲಿ ಐದು ವಿಕೆಟ್ ಪಡೆದ 3ನೇ ಬೌಲರ್ ಎನಿಸಿದರು.