ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ದಾಂಪತ್ಯಕ್ಕೆ ಗಣ್ಯರ ಹಾರೈಕೆ; ಆರತಕ್ಷತೆಯಲ್ಲಿ ಚಿತ್ರರಂಗ, ಕ್ರೀಡಾಕ್ಷೇತ್ರದವರು ಭಾಗಿ...

web sindhu
Published on

ಹೈದರಾಬಾದ್​: ಕಳೆದ ಭಾನುವಾರ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಹಾಗೂ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಮತ್ತು ಉದ್ಯಮಿ ವೆಂಕಟ ದತ್ತ ಸಾಯಿ ದಂಪತಿಗೆ ಮಂಗಳವಾರ ರಾತ್ರಿ ಹೈದರಾಬಾದ್​ನಲ್ಲಿ ನಡೆದ ಆರತಕ್ಷತೆಯಲ್ಲಿ ಗಣ್ಯರು ಶುಭಹಾರೈಸಿದರು.

ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ, ಚಿತ್ರರಂಗದ ತಾರೆಯರಾದ ಚಿರಂಜೀವಿ, ನಾಗಾರ್ಜುನ, ಅಜಿತ್​ ಕುಮಾರ್​, ಅರ್ಜುನ್​ ಸರ್ಜಾ, ಮೃಣಾಲ್​ ಠಾಕೂರ್​, ರೋಜಾ, ಗಾಯಕಿ ಮಂಗ್ಲಿ, ಮಾಜಿ ಟೆನಿಸ್​ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್​ ತಾರೆಯರಾದ ಚಿರಾಗ್​ ಶೆಟ್ಟಿ, ಸಾತ್ವಿಕ್​ ಸಾಯಿರಾಜ್​ ಸಹಿತ ಅನೇಕರು ನವದಂಪತಿಯನ್ನು ಹರಸಿದರು.

29 ವರ್ಷದ ಸಿಂಧು ಮದುವೆಯ ನಂತರವೂ ಬ್ಯಾಡ್ಮಿಂಟನ್​ನಲ್ಲಿ ಮುಂದುವರಿಯಲಿದ್ದು, 2027ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ವರೆಗೆ ಆಡುವ ಹಂಬಲ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net