PHOTO | ಟ್ವಿಟರ್‌ನಲ್ಲಿ 'ವೆಲ್‌ಕಂ ಬ್ಯಾಕ್ ಧೋನಿ' ಭರ್ಜರಿ ಟ್ರೆಂಡಿಂಗ್‌

welcome back dhoni web
Published on

ಬೆಂಗಳೂರು: ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸುಮಾರು 400 ದಿನಗಳ ಬಳಿಕ ಮರಳಿ ಕ್ರಿಕೆಟ್ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಶನಿವಾರ ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದ ಮೂಲಕ ಅಬುಧಾಬಿಯಲ್ಲಿ ಧೋನಿ ಮರಳಿ ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಅಭಿಮಾನಿಗಳು ‘ವೆಲ್‌ಕಂ ಬ್ಯಾಕ್ ಧೋನಿ’ ಹ್ಯಾಷ್‌ಟ್ಯಾಗ್ ಮೂಲಕ ಭರ್ಜರಿ ಟ್ರೆಂಡಿಂಗ್ ಸೃಷ್ಟಿಸಿದ್ದಾರೆ.

ಕಳೆದ ಆಗಸ್ಟ್ 15ರಂದು ಧೋನಿ ಸಂಜೆ 7.29ರ (19.29) ನಂತರ ನನ್ನನ್ನು ನಿವೃತ್ತ ಎಂದು ಪರಿಗಣಿಸಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಅದೇ ಧೋನಿ ಈಗ ಸಂಜೆ 7 ಗಂಟೆಗೆ (19.00) ಐಪಿಎಲ್ ಉದ್ಘಾಟನಾ ಪಂದ್ಯದ ಟಾಸ್ ಮೂಲಕ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಕಾತರವನ್ನು ಹೆಚ್ಚಿಸಿದೆ.

2019ರ ಜುಲೈ 10ರಂದು ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದ 39 ವರ್ಷದ ಧೋನಿ, ಬಳಿಕ ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಮರಳುವ ನಿರೀಕ್ಷೆ ಇತ್ತು. ಆದರೆ ವಿಶ್ವಕಪ್ ಮುಂದೂಡಿಕೆಯ ಬೆನ್ನಲ್ಲೇ ಕಳೆದ ಆಗಸ್ಟ್‌ನಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದರು. ಕಳೆದ ಮಾರ್ಚ್‌ನಲ್ಲೇ ಅವರು ಐಪಿಎಲ್‌ನಲ್ಲಿ ಆಡುವ ಸಿದ್ಧತೆ ನಡೆಸಿದ್ದರೂ, ಟೂರ್ನಿ ಮುಂದೂಡಿಕೆಯಿಂದಾಗಿ ಮೈದಾನಕ್ಕೆ ಮರಳುವುದು ವಿಳಂಬಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net