ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡದಿಂದ ಪ್ಲೆಸಿಸ್, ಮಾರಿಸ್, ತಾಹಿರ್ ಔಟ್

sa t20 web
Published on

ಕೇಪ್‌ಟೌನ್: ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್ ಮತ್ತು ಹಿರಿಯ ಸ್ಪಿನ್ನರ್ ಇಮ್ರಾನ್ ತಾಹಿರ್ ಮುಂಬರುವ ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಕಳೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದ ಆಲ್ರೌಂಡರ್ ಕ್ರಿಸ್ ಮಾರಿಸ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ.

37 ವರ್ಷದ ಪ್ಲೆಸಿಸ್ ಟಿ20 ವಿಶ್ವಕಪ್‌ನತ್ತ ಗಮನ ಹರಿಸುವ ಸಲುವಾಗಿಯೇ ಕಳೆದ ಫೆಬ್ರವರಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದರು. ಕಳೆದ ಡಿಸೆಂಬರ್‌ನಿಂದ ಅವರು ದಕ್ಷಿಣ ಆಫ್ರಿಕಾದ ಸೀಮಿತ ಓವರ್ ತಂಡದಲ್ಲಿ ಸ್ಥಾನ ಪಡೆದಿಲ್ಲ. 42 ವರ್ಷದ ತಾಹಿರ್ 2019ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ, ಟಿ20 ವಿಶ್ವಕಪ್‌ನಲ್ಲಿ ಆಡುವ ಹಂಬಲ ಹೊಂದಿದ್ದರು. ಕಳೆದ 2 ವರ್ಷಗಳಿಂದ ದಕ್ಷಿಣ ಆಫ್ರಿಕಾ ಪರ ಆಡದ ಕಾರಣ ಕ್ರಿಸ್ ಮಾರಿಸ್ ಕೂಡ ವಿಶ್ವಕಪ್‌ಗೆ ಸ್ಥಾನ ಸಂಪಾದಿಸಲು ವಿಫಲರಾಗಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್, ಜೋರ್ನ್ ಫೋರ್​ಟುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಎನ್ರಿಜ್ ನೋಕಿಯಾ, ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬರೇಜ್ ಶಮ್ಸಿ, ರಸ್ಸಿ ವಾನ್ ಡರ್ ಡುಸೆನ್.

ಮೀಸಲು ಆಟಗಾರರು: ಆಂಡಿಲ್ ಪೆಹ್ಲುಕ್‌ವಾಯೊ, ಜಾರ್ಜ್ ಲಿಂಡೆ, ಲಿಜಾದ್ ವಿಲಿಯಮ್ಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net