

ಜೊಹಾನ್ಸ್ ಬರ್ಗ್: ಕೋವಿಡ್-19ರ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಜನ ಸಾಮಾನ್ಯರ ಪಾಡಂತು ಹೇಳತೀರದು. ಬಡ ಜನರಿಗೆ ಹಲವು ಸಂಘ-ಸಂಸ್ಥೆಗಳು, ಸಿರಿವಂತರು ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಮಾತ್ರ ಎಲ್ಲರಿಗೂ ವಿಭಿನ್ನ. ದುರ್ಬಲ ಮಕ್ಕಳಿಗಾಗಿ ಒಬ್ಬರಿಗೊಬ್ಬರು ಸವಾಲು ನೀಡುವ ಮೂಲಕ ಹಣ ಸಂಗ್ರಹಿಸಿದ್ದಾರೆ. ಮಾಜಿ ಸಹಪಾಠಿ ಎಬಿ ಡಿವಿಲಿಯರ್ಸ್ ನೀಡಿದ ಸವಾಲು ಸ್ವೀಕರಿಸಿದ ಸ್ಟಾರ್ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್, ಕೆಲವೊಂದು ಕ್ರಿಕೆಟ್ ಪರಿಕರಗಳನ್ನು ಹರಾಜಿಗಿಡುವ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ.
ಪ್ಲೆಸಿಸ್ ಇದಕ್ಕೂ ಮೊದಲು ಹಲವು ಬಾರಿ ಚಾರಿಟಿ ಕೆಲಸಗಳಲ್ಲಿ ತೊಡಗಿದ್ದಾರೆ. 36 ವರ್ಷದ ಪ್ಲೆಸಿಸ್, ಪತ್ನಿ ಇಮ್ರಾರಿ ವಿಸ್ಸೆರ್ ತಮ್ಮ ಚಾರಿಟಿ ವತಿಯಿಂದ ದಕ್ಷಿಣ ಆಫ್ರಿಕಾದ 35 ಸಾವಿರ ಮಕ್ಕಳಿಗೆ ಸಹಾಯ ಮಾಡಿದ್ದರು.