ಎಸ್‌ಎಫ್‌ಎ ಚಾಂಪಿಯನ್‌ಷಿಪ್:100 ಮೀ. ಓಟದಲ್ಲಿ ನೀಲ್‌ ಪಾಲ್ಕೊಂಡ ಮತ್ತು ವೈಷ್ವಿಗೆ ಚಿನ್ನ

New Project
Published on

ಬೆಂಗಳೂರು: ಡಿಪಿಎಸ್‌ ಸರ್ಜಾಪುರದ ನೀಲ್‌ ಪಾಲ್ಕೊಂಡ ಮತ್ತು ವೈಷ್ವಿ ಆರ್‌ಎನ್‌ಎಸ್‌ ಇಂಟರ್‌ನ್ಯಾಷನಲ್‌ ಶಾಲೆಯ ನೀಲ್‌ ಪಾಲ್ಕೊಂಡ ಅವರು ಎಸ್‌ಎಫ್‌ಎ ಚಾಂಪಿಯನ್‌ಷಿಪ್‌ 2024ರ ಆರಂಭಿಕ ದಿನವಾದ ಬುಧವಾರ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ 100 ಮೀ. ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿವೇಗದ ಓಟಗಾರರಾಗಿ ಹೊರಹೊಮ್ಮಿದರು.

ಸಾಯ್‌ ನೇತಾಜಿ ಸುಭಾಷ್‌ ಸದರ್ನ್‌ ಸೆಂಟರ್‌, ಪಡುಕೋಣೆ ದ್ರಾವಿಡ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌, ಕರ್ನಾಟಕ ರಾಜ್ಯ ಹಾಕಿ ಅಸೋಸಿಯೇಷನ್‌ ಮತ್ತು ಫೋರ್ಸ್‌ 1 ಸ್ಕೇಟಿಂಗ್‌ ರಿಂಕ್‌ ಸೇರಿದಂತೆ ನಗರದಾದ್ಯಂತ ಹರಡಿರುವ ಸ್ಥಳಗಳಲ್ಲಿ18 ಸಾವಿರಕ್ಕೂ ಹೆಚ್ಚು ಉದಯೋನ್ಮುಖ ಕ್ರೀಡಾಪಟುಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯಲಿದ್ದಾರೆ. ಹಿಂದಿನ ಆವೃತ್ತಿಯ 12,000 ಸ್ಪರ್ಧಿಗಳ ಪಾಲ್ಗೊಳ್ಳುವಿಕೆಯಿಂದ ಗಮನಾರ್ಹ ಬೆಳವಣಿಗೆಯನ್ನು ಇದು ಗುರುತಿಸುತ್ತದೆ. ಇದಲ್ಲದೆ, ಈ ವರ್ಷದ ಎಸ್‌ಎಫ್‌ಎ ಚಾಂಪಿಯನ್‌ಷಿಪ್‌ನಲ್ಲಿ458 ಶಾಲೆಗಳು  ಪ್ರತಿನಿಧಿಸಲಿವೆ.

ಸ್ಪೋರ್ಟ್ಸ್ ಫಾರ್‌ ಆಲ್‌ (ಎಸ್‌ಎಫ್‌ಎ) ತಳಮಟ್ಟದ ಕ್ರೀಡೆಗಳನ್ನು ವೃತ್ತಿಪರಗೊಳಿಸಲು, ಸಂಘಟಿಸಲು ಬದ್ಧವಾಗಿದೆ. ಇದಲ್ಲದೆ, ರಾಷ್ಟ್ರವ್ಯಾಪಿ ಕ್ರೀಡೆಗಳನ್ನು ಮೌಲ್ಯೀಕರಿಸುವ ಮತ್ತು ಹೂಡಿಕೆ ಮಾಡುವ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ವರ್ಷದ ಚಾಂಪಿಯನ್‌ಷಿಪ್‌ ನವೆಂಬರ್‌ 22ರವರೆಗೆ ನಡೆಯಲಿದ್ದು, ಅತ್ಯುತ್ತಮ ಪ್ರತಿಭೆಗಳ ಹುಡುಕಾಟದಲ್ಲಿಬೆಂಗಳೂರಿನಾದ್ಯಂತದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

14 ವರ್ಷದೊಳಗಿನ ಬಾಲಕರ 100 ಮೀಟರ್‌ ಓಟದಲ್ಲಿನೀಲ್‌ ಚಿನ್ನ ಗೆದ್ದರೆ, ವಿದ್ಯಾಶಿಲ್ಪ ಅಕಾಡೆಮಿಯ ಲû… ತಿಮ್ಮಯ್ಯ ಮತ್ತು ಡಿಪಿಎಸ್‌ ಎಲೆಕ್ಟ್ರಾನಿಕ್‌ ಸಿಟಿಯ ಅದ್ಯಾನ್ಶ್‌ ಪಟ್ನಾಯಕ್‌ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿವೈಷ್ವಿ ಚಿನ್ನ ಗೆದ್ದರೆ, ಡಿಪಿಎಸ್‌ ಸರ್ಜಾಪುರದ ರೈಕಾ ಗುರುಪ್ರಕಾಶ್‌ ಬೆಳ್ಳಿ ಗೆದ್ದರು.

ವೈಟ್‌ಫೀಲ್ಡ್‌ನ ದೆಹಲಿ ಪಬ್ಲಿಕ್‌ ಶಾಲೆಯ ಅಯಾನ್‌ ಲಾಲ್‌ 16 ವರ್ಷದೊಳಗಿನ ಬಾಲಕರ 2000 ಮೀಟರ್‌ ಓಟದಲ್ಲಿಚಿನ್ನದ ಪದಕ ಗೆದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net