

ಮುಂಬೈ: ಕಳೆದ ವಾರ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-3 ಅಂತರದಿಂದ ಸೋಲುಂಡಿದ್ದು, ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ ಮಿಸ್ ಮಾಡಿಕೊಂಡಿದೆ. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ಗಳ ಭರ್ಜರಿ ಜಯಗಳಿಸಿದ್ದು ಬಿಟ್ಟರೆ ಟೀಮ್ ಇಂಡಿಯಾ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, 10 ವರ್ಷಗಳ ಬಳಿಕ ಟೆಸ್ಟ್ ಸರಣಿಯಲ್ಲಿ ಸೋಲುಂಡಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ ದೃಷ್ಠಿಯಿಂದಲೂ ಭಾರತಕ್ಕೆ ಈ ಟೂರ್ನಿ ಮಹತ್ವದಾಗಿತ್ತು.
ಇನ್ನೂ ಭಾರತ ತಂಡದ ಪ್ರದರ್ಶನಕ್ಕೆ ಬರುವುದಾದರೆ ಹಿರಿಯ ಆಟಗಾರರಾದ ರೋಹಿತ್ (Rohit Sharma) ಹಾಗೂ ವಿರಾಟ್ (Virat Kohli) ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ, ನಿರೀಕ್ಷೆ ಮೂಡಿಸಿದ್ದ ಈ ಇಬ್ಬರು ಆಟಗಾರರು ಭಾರೀ ನಿರಾಸೆ ಮೂಡಿಸಿದ್ದು, ಸರಣಿ ಮುಗಿದ ಬೆನ್ನಲ್ಲೇ ಇವರುಗಳ ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ಮಾಜಿ ಆಟಗಾರ ಮನೋಜ್ ತಿವಾರಿ ಮಾತನಾಡಿದ್ದು, ರೋಹಿತ್ ಹಾಗೂ ವಿರಾಟ್ರನ್ನು ತಂಡದಿಂದ ಕೈ ಬಿಡುವ ಬಗ್ಗೆ ಯೋಚಿಸಬೇಡಿ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ತಿವಾರಿ, ನನ್ನ ಪ್ರಕಾರ ರೋಹಿತ್ ಶರ್ಮ (Rohit Sharma) ಈಗಾಗಲೇ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ಅವರ ಸ್ವಂತ ನಿರ್ಧಾರ ಎಂದು ಭಾವಿಸುತ್ತೇನೆ. ವಿರಾಟ್ ಹಾಗೂ ರೋಹಿತ್ರನ್ನು ತಂಡದಿಂದ ಹೊರಗಿಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ರೋಹಿತ್ (Rohit Sharma) ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಡಬೇಕಿತ್ತು. ಏಕೆಂದರೆ ಅವರು ಅವರು ರನ್ ಗಳಿಸಲಿಲ್ಲ ಎಂದು ಹೇಳಿದರು.
ನಾನು ನೋಡಿದಂತೆ ಇತರರು ಸಹ ಹಾಗೆ ಮಾಡುತ್ತಿರಲಿಲ್ಲ ಬೇರೆಯವರಿಗಿಂತ ನಿಮ್ಮನ್ನು ಕೈಬಿಡಬೇಕು ಎಂದು ನೀವು ಭಾವಿಸುವ ಮನಸ್ಥಿತಿಯು ನಿಮ್ಮ ಸ್ವಂತ ಸಾಮರ್ಥ್ಯಗಳನ್ನು ಅನುಮಾನಿಸುತ್ತಿದೆ ಮತ್ತು ಇತರರ ಸಾಮರ್ಥ್ಯಗಳನ್ನು ನಿಮ್ಮ ಮೇಲೆ ಇರಿಸುತ್ತದೆ. ಇದನ್ನು ಒಬ್ಬ ನಾಯಕ ಮಾಡಬಾರದು. ರೋಹಿತ್ ಶರ್ಮಾ (Rohit Sharma) ಅದ್ಭುತ ಪ್ರತಿಭೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಏನೆಂದು ಈಗಾಗಲೇ ಸಾಬೀತುಪಡಿಸಿಕೊಂಡಿದ್ದಾರೆ. ಈ ವಿಷಯಗಳನ್ನು ಸರಿಪಡಿಸಬಹುದು, ಮತ್ತು ನೀವು ಹಿಂತಿರುಗಬಹುದು ಮತ್ತು ತಂಡದಿಂದ ದೂರ ಉಳಿದಿದ್ದು, ನನಗೇನು ಅಷ್ಟಾಗಿ ಸರಿ ಕಾಣಲಿಲ್ಲ ಎಂದು ಮಾಜಿ ಆಟಗಾರ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ಧಾರೆ.