ನೀವು IPLನಲ್ಲಿ ಆಡಬೇಡಿ; ಡೇವಿಡ್​ ವಾರ್ನರ್​ಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

David warner
Published on

ನವದೆಹಲಿ: ಹಾಲಿ IPL ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಸೋಲುಂಡಿದ್ದು ನಾಯಕ ಡೇವಿಡ್​ ವಾರ್ನರ್​ಗೆ ನೀವು ಆಡದೇ ಇರುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಸಲಹೆ ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​​ ಹ್ಯಾಟ್ರಿಕ್​ ಸೋಲಿನ ಕುರಿತು ಮಾತನಾಡಿರುವ ಸೆಹ್ವಾಗ್​ ಡೇವಿಡ್​ ಅವರೇ ನೀವು ಯಶಸ್ವಿ ಜೈಸ್ವಾಲ್​ ತರಹ 25 ಬಾಲ್​ಗಳಲ್ಲಿ 50ರನ್​ ಗಳಿಸಿ. ಅದು ಸಾಧ್ಯವಾಗದಿದ್ದಲ್ಲಿ IPL ಆಡುವುದನ್ನು ಬಿಟ್ಟು ಬಿಡಿ.

ಹೆಚ್ಚಿನ ರನ್​ ಗಳಿಸುವ ಅವಶ್ಯಕತೆ ಇಲ್ಲ

ತಂಡದ ದೊಡ್ಡ ಹಿಟರ್​ಗಳಾದ ರೋಮೆನ್​ ಪೊವೆಲ್​ ಹಾಗೂ ಇಶಾನ್​ ಪೊರೆಲಗ್​ ದೊಡ್ಡ ಹಿಟರ್​ಗಳಾಗಿದ್ದು ಡೇವಿಡ್​ ವಾರ್ನರ್​ 65 ರನ್​ ಗಳಿಸುವ ಬದಲು 30 ರನ್​ ಗಳಿಸಿದ್ದರೆ ಸಾಕಾಗುತ್ತಿತ್ತು.

Sehwag

ನೀವು ಔಟ್​ ಆದ ವೇಳೆಗೆ ಹೆಚ್ಚಿನ ರನ್​ ಹಾಗೂ ಕಡಿಮೆ ಬಾಲ್​ಗಳು ಇದ್ದ ಕಾರಣ ತಂಡ ಗೆಲ್ಲಲು ಸಾದ್ಯವಾಗಲಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

ಸತತ ಸೋಲು

ಖಾಯಂ ನಾಯಕ ರಿಷಭ್​ ಪಂತ್​ ಅನುಪಸ್ಥಿತಿಯಲ್ಲಿ ಡೇವಿಡ್​ ವಾರ್ನರ್​​ ನೇತೃತ್ವದಲ್ಲಿ ಕಣಕ್ಕಿಳಿದಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಸತತ ಮೂರು ಸೋಲುಗಳೊಂದಿಗೆ ತನ್ನ ಆಭಿಯಾನವನ್ನು ಶುರು ಮಾಡಿರುವುದು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಮೊದಲ ಪಂದ್ಯದಲ್ಲಿ LSG ವಿರುದ್ಧ 50 ರನ್​ಗಳ ಸೋಲು, ಎರಡನೇ ಪಂದ್ಯದಲ್ಲಿ ಗುಜರಾತ್​ ವಿರುದ್ಧ 6 ವಿಕೆಟ್​, ರಾಜಸ್ಥಾನ ರಾಯಲ್ಸ್​ ವಿರುದ್ಧ 57 ರನ್​ಗಳ ಸೋಲನ್ನು ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net