ರಾಹುಲ್​-ಸರ್ಫರಾಜ್​ ಪೈಕಿ ಯಾರಿಗೆ ಗೇಟ್​ಪಾಸ್​; ಎರಡನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಮಹತ್ವದ ಹೇಳಿಕೆ ಕೊಟ್ಟ ಕೋಚ್​ Gautam Gambhir

Gautam Gambhir
Published on

ಪುಣೆ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಭಾರತ (Team India) ಹಾಗೂ ನ್ಯೂಜಿಲೆಂಡ್​ (NewZealand) ನಡುವಿನ ಟೆಸ್ಟ್​ ಸರಣಿಯ (Test Series) ಮೊದಲ ಪಂದ್ಯದಲ್ಲಿ ಆತಿತೇಯರು ಹೀನಾಯ ಸೋಲು ಕಂಡಿದ್ದು, ಸರಣಿಯ ಎರಡನೇ ಹಾಗೂ ಮೂರನೇ ಪಂದ್ಯದ ಮೂಲಕ ಕಮ್​ಬ್ಯಾಕ್​ ಮಾಡಬೇಕೆಂದು ಪಣತೊಟ್ಟು ಕಠಿಣ ಅಭ್ಯಾಸ್ ನಡೆಸುತ್ತಿದೆ. ಅಕ್ಟೋಬರ್​​ 24ರಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಸರಣಿಯ ಎರಡನೇ ಪಂದ್ಯ ನಡೆಯಲಿದ್ದು, ಪ್ರವಾಸಿ ತಂಡಕ್ಕೆ ಶಾಕ್​ ಕೊಡಬೇಕೆಂಬ ನಿಟ್ಟಿನಲ್ಲಿ ಟೀಮ್​ ಇಂಡಿಯಾ (Team India) ಯೋಜನೆ ರೂಪಿಸಿದೆ.

ಇನ್ನೂ ಸರಣಿಯ ಮೊದಲ ಪಂದ್ಯದಲ್ಲಿ ಆದ ಎಡವಟ್ಟುಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ತಂಡದಲ್ಲಿ (Team India) ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದ್ದು, ಶುಭಮನ್​ ಗಿಲ್​ (Shubman Gill) ತಂಡಕ್ಕೆ ಕಮ್​ಬ್ಯಾಕ್​ ಮಾಡಬಹುದು ಎಂದು ಹೇಳಲಾಗಿದೆ. ಕತ್ತು ನೋವು ಕಾಣಿಸಿಕೊಂಡಿದ್ದರಿಂದ ಸರಣಿಯ ಮೊದಲ ಪಂದ್ಯದಲ್ಲಿ ಹೊರಗುಳಿದಿದ್ದ ಗಿಲ್​ ಇದೀಗ ಫಿಟ್​ ಆಗಿದ್ದು, ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದ್ದಾರೆ. ಶುಭಮನ್​ ಗಿಲ್​ ತಂಡಕ್ಕೆ ವಾಪಸ್​ ಆದರೆ, ರಾಹುಲ್​ (KL Rahul) ಅಥವಾ ಸರ್ಫರಾಜ್​ರನ್ನು (Sarfaraz) ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆ ಮಾಡಲಾಗುತ್ತಿದ್ದು, ಕೋಚ್​ ಗೌತಮ್​ ಗಂಭೀರ್ (Coach Gautam Gambhir)​ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಏನು ಬರುತ್ತದೆ ಎಂಬುದು ಮುಖ್ಯವಲ್ಲ. ನಮಗೆ ತಂಡದ ತಂಡದ ನಿರ್ವಹಣೆ, ನಾಯಕತ್ವ ಮತ್ತು ತಂಡ ಹೇಗೆ ಆಡುತ್ತದೆ ಎಂಬುದು ನಮಗೆ ಬಹಳ ಮುಖ್ಯವಾಗಿದೆ. ನಮ್ಮವರು ಉತ್ತಮ ಲಯದಲ್ಲಿದ್ದು, ಕಾನ್ಪುರದಲ್ಲಿ ನಡೆದ ಟೆಸ್ಟ್​ ಅದಕ್ಕೆ ಉದಾಹರಣೆಯಾಗಿದೆ. ಸದ್ಯದ ಮಟ್ಟಿಗೆ ಎಲ್ಲರೂ ಲಯದಲ್ಲಿದ್ದು, ದೊಡ್ಡ ಸ್ಕೋರ್​ ಗಳಿಸುತ್ತಾರೆ ಎಂಬುದು ನನಗೆ ಖಚಿತವಾಗಿದೆ. ಅಂತಿಮವಾಗಿ ತಂಡ ಆಯ್ಕೆ ಮಾಡುವುದು ನಮಗೆ ಬಿಟ್ಟಿದ್ದು ಎಂದು ಕೋಚ್​ ಗೌತಮ್​ ಗಂಭೀರ್​ (Coach Gautam Gambhir) ಹೇಳಿದ್ದಾರೆ. 

ಬೆಂಗಳೂರು ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಶತಕದೊಂದಿಗೆ ತಂಡಕ್ಕೆ ನೆರವಾಗಿದ್ದ ಸರ್ಫರಾಜ್​ ಖಾನ್​ ದ್ವಿತೀಯ ಪಂದ್ಯದಲ್ಲೂ ಸ್ಥಾನ ಪಡೆಯುವುದು ಖಚಿತವಾಗಿದೆ. ಬೆಂಗಳೂರು ಟೆಸ್ಟ್​ನಲ್ಲಿ ರನ್​ ಗಳಿಸಲು ವಿಫಲರಾಗಿದ್ದ ರಾಹುಲ್​ ಬದಲಿಗೆ ಗಿಲ್​ ಆಯ್ಕೆಯಾಗುವುದು ಖಚಿತವಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸರ್ಫರಾಜ್​ ಬದಲಿಗೆ ರಾಹುಲ್​ಗೆ ಚಾನ್ಸ್​ ಕೊಡಲಾಗುತ್ತದೆ ಎಂಬ ಪೋಸ್ಟ್​ ವೈರಲ್​ ಆಗಿದ್ದು, ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net