

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ರಜತ ಪದಕ ಜಯಿಸಿದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಫೈನಲ್ ವೇಳೆ ಧರಿಸಿದ್ದ ಕೈಗಡಿಯಾರದ ಬೆಲೆ 52 ಲಕ್ಷ ರೂ. ಆಗಿದೆ ಎಂದು ವರದಿಯಾಗಿದೆ.
ಸ್ವಿಸ್ ವಾಚ್ ಕಂಪನಿ "ಒಮೆಗಾ'ಗೆ ನೀರಜ್ ಚೋಪ್ರಾ ಪ್ರಚಾರ ರಾಯಭಾರಿಯಾಗಿದ್ದು, ಅದೇ ಕಂಪನಿ ನೀಡಿರುವ ವಾಚ್ ಧರಿಸಿ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದಾರೆ ಎನ್ನಲಾಗಿದೆ.
ನೀರಜ್ ಫೈನಲ್ ವೇಳೆ ಧರಿಸಿದ್ದ ವಾಚ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗಳು ನಡೆದ ಬಳಿಕ ಅದರ ಬ್ರ್ಯಾಂಡ್ ಮತ್ತು ಮೌಲ್ಯ ಬೆಳಕಿಗೆ ಬಂದಿದೆ. "ಒಮೆಗಾ' ಕಂಪನಿ ಪ್ಯಾರಿಸ್ ಒಲಿಂಪಿಕ್ಸ್ನ ಅಧಿಕೃತ "ಟೈಮ್ಕೀಪರ್' ಕೂಡ ಆಗಿತ್ತು.