ಹಾರ್ದಿಕ್​ ಪಾಂಡ್ಯ ಅವರ ಫಿಟ್ನೆಸ್​ ಸೀಕ್ರೆಟ್​ ಏನು ಗೊತ್ತಾ? |Hardik Pandya

untitled-design-57-68945d2b94fe2
Published on

Hardik Pandya: ಹಾರ್ದಿಕ್​ ಪಾಂಡ್ಯ ಜನಪ್ರಿಯ ಕ್ರಿಕೆಟ್​ ಆಟಗಾರ ಹಾಗೂ ಫಿಟ್ನೆಸ್​ ದೇಹ ಹೊಂದಿದಂತ ಕ್ರಿಕೆಟಿಗ. ಅವರ ದೇಹದ ಫಿಟ್​ನೆಸ್​ ಬಗ್ಗೆ ನೆಟ್ಟಿಗರಲ್ಲಿ ಕುತೂಹಲ ಹೆಚ್ಚಾಗಿದ್ದು, ಅನೇಕ ಬಾರಿ ಅದರ ಬಗ್ಗೆ ತಿಳಿಸಿ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಎಲ್ಲಾ ನೆಟ್ಟಿಗರ ಪ್ರಶ್ನೆಗಳಿಗೆ ಬ್ರೇಕ್​ ಹಾಕಿದ ಕ್ರಿಕೆಟಿಗ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ ದಿನನಿತ್ಯದ ದಿನಚರಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಬೆಳಿಗ್ಗೆ ಎದ್ದ ತಕ್ಷಣ ಮೊದಲು 500 ಮಿ.ಲೀಟರ್​ ನೀರು ಕುಡಿಯುವುದಾಗಿ ತಿಳಿಸಿದ್ದಾರೆ. ಇದು ದೇಹವನ್ನು ಹೈಡ್ರೇಟ್​​ ಮಾಡುತ್ತದೆ. ಇದರಿಂದ ಜಿಮ್​ ಮಾಡಲು ಸಹಾಯವಾಗುತ್ತದೆ ಎಂದಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಒಂದಕ್ಕಿಂತ ಹೆಚ್ಚು ಸಹಾಯಮಾಡುತ್ತದೆ. ಹೆಲ್ತ್​ಲೈನ್ ಪ್ರಕಾರ ನೀರು ಕುಡಿಯುವುದರಿಂದ ದೇಹವನ್ನು ಹೈಡ್ರೀಕರಿಸುವ ಮೂಲಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ನೀಡುವುದಿಲ್ಲ.

ವಿಡಿಯೊದಲ್ಲೇನಿದೆ?

ಹಾರ್ದಿಕ್​ ಪಾಂಡ್ಯ ಜಿಮ್​ಗೆ ಹೋಗಿ ಬಂದ ನಂತರ 650 ಗ್ರಾಂ ಕ್ಯಾಲೋರಿ ಹಾಗೂ 30 ಗ್ರಾಂ ಪ್ರೋಟೀನ್​ ಹೊಂದಿರುವಂತ ಆಹಾರ ಸೇವಿಸುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಸೂರ್ಯಕಾಂತಿ ಬೀಜ, ಓಟ್ಸ್​, ಆವಕಾಡೊ, ಬಾದಾಮಿ, ಬಾಳೆಹಣ್ಣು ಹಾಗೂ ಹಾಲು ಇರುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net