ಜೋಕೊವಿಕ್‌ಗೆ ಯುಎಸ್ ಓಪನ್ ಮುಕುಟ: 4ನೇ ಬಾರಿಗೆ ಪ್ರಶಸ್ತಿ ಗೆದ್ದ ಸೆರ್ಬಿಯಾ ತಾರೆ

New-Project-14
Published on

ನ್ಯೂಯಾರ್ಕ್: ಕರೊನಾ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಕಳೆದ ವರ್ಷ ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್‌ಗೆ ಯುಎಸ್ ಓಪನ್‌ಗೆ ಪ್ರವೇಶ ನಿರಾಕರಿಸಲಾಗಿತ್ತು. ಅದಾದ ವರ್ಷದ ಬಳಿಕ ಅದೇ ಅಂಗಣದಲ್ಲಿ 4ನೇ ಬಾರಿಗೆ ಪುರುಷರ ಸಿಂಗಲ್ಸ್ ಟ್ರೋಫಿ ಜಯಿಸುವ ಮೂಲಕ ದಾಖಲೆ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಹೊಸ ಇತಿಹಾಸವನ್ನು ಜೋಕೊವಿಕ್ ಸೃಷ್ಟಿಸಿದರು.

ತನ್ಮೂಲಕ ಸಾರ್ವಕಾಲಿಕವಾಗಿ ಅತಿ ಹೆಚ್ಚು ಗ್ರಾಂಡ್ ಸ್ಲಾಂ ಕಿರೀಟ ಜಯಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ (24) ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಲಿ ಋತುವಿನಲ್ಲಿ ಅವರ ಪಾಲಿಗಿದು ಮೂರನೇ ಗ್ರಾಂಡ್ ಸ್ಲಾಂ ಸಾಧನೆ. ವರ್ಷಾರಂಭದಲ್ಲಿ ಆಸ್ಟ್ರೇಲಿಯನ್ ಓಪನ್, ್ರೆಂಚ್ ಓಪನ್ ಗೆದ್ದಿದ್ದರು. ಎರಡನೇ ಬಾರಿಗೆ ಯುಎಸ್ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ರಷ್ಯನ್ ಆಟಗಾರ ಡೆನಿಲ್ ಮೆಡ್ವೆಡೇವ್ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಕಂಡರು. ಇದು 2021ರ ೈನಲಿಸ್ಟ್‌ಗಳ ಮರುಪಂದ್ಯ ಎನಿಸಿತ್ತು.

ಭಾನುವಾರ ರಾತಿ ್ರ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ೈನಲ್‌ನಲ್ಲಿ ಜೋಕೊವಿಕ್, ಮೂರನೇ ಶ್ರೇಯಾಂಕಿತ ಡೆನಿಲ್ ಮೆಡ್ವೆಡೇವ್ ಅವರನ್ನು 6-3, 7-6(5),6-3 ನೇರ ಸೆಟ್‌ಗಳಿಂದ ಮಣಿಸಿದರು. ಇದರೊಂದಿಗೆ ಮುಕ್ತ ಟೆನಿಸ್ ಯುಗದಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಅತೀ ಹೆಚ್ಚು ಗ್ರಾಂಡ್‌ಸ್ಲಾಂ ಗೆದ್ದವರ ಪಟ್ಟಿಯಲ್ಲಿ ಅಮೆರಿಕದ ಸೆರೇನಾ ವಿಲಿಯಮ್ಸ್ (23) ದಾಖಲೆಯನ್ನು ಹಿಂದಿಕ್ಕಿದ್ದರು.

ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ದಾಖಲಿಸುವ ಮೂಲಕ ವಿಶ್ವ ರ‌್ಯಾಂಕಿಂಗ್‌ನಲ್ಲೂ ಮತ್ತೆ ನಂ.1 ಸ್ಥಾನವನ್ನು ಖಚಿತಪಡಿಸಿಕೊಂಡಿದ್ದ 36 ವರ್ಷದ, ಜೋಕೊವಿಕ್ ಭಾನುವಾರ ಮೊದಲ ಸೆಟ್‌ನಲ್ಲಿ ಸುಲಭವಾಗಿ ಮೇಲುಗೈ ದಾಖಲಿಸಿದರು. ಎರಡನೇ ಸೆಟ್‌ನಲ್ಲಿ ಮೆಡ್ವೆಡೇವ್ ಅಲ್ಪ ಪ್ರತಿರೋಧ ತೋರುವ ಮೂಲಕ ಟೈ ಬ್ರೇಕರ್‌ಗೂ ತೆಗೆದುಕೊಂಡು ಹೋದರು. ಆದರೆ, 1 ಗಂಟೆ 44 ನಿಮಿಷಗಳ ಸುದೀರ್ಘ ಹೋರಾಟದ ಸೆಟ್‌ನಲ್ಲಿ ಜೋಕೋ ಪ್ರಾಬಲ್ಯ ಸಾಧಿಸಿದರು. ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಅನುಭವಿ ಆಟ ಪ್ರದರ್ಶಿಸಿದ ಜೋಕೋ, 3 ಗಂಟೆ 16 ನಿಮಿಷದಲ್ಲಿ ಗೆಲುವು ದಕ್ಕಿಸಿಕೊಂಡರು. ಈ ಮೂಲಕ ಮುಕ್ತ ಟೆನಿಸ್ ಯುಗದಲ್ಲಿ ಹೆಚ್ಚು ಬಾರಿ ಯುಎಸ್ ಟ್ರೋಫಿ ಜಯಿಸಿದ 6ನೇ ಆಟಗಾರ ಎನಿಸಿದರು. ಜಿಮ್ಮಿ ಕಾನರ್ಸ್‌, ಪಿಂಟ್ ಸಾಂಪ್ರಾಸ್, ರೋಜರ್ ೆಡರರ್ ತಲಾ ಐದು ಬಾರಿ ಜಯಿಸಿದ್ದರೆ, ಜಾನ್ ಮೆಕೆನ್ರೋ, ರಾೆಲ್ ನಡಾಲ್ 4 ಬಾರಿ ಟ್ರೋಫಿ ಒಲಿಸಿಕೊಂಡಿದ್ದಾರೆ. ಇದರೊಂದಿಗೆ ಮುಕ್ತ ಟೆನಿಸ್ ಯುಗದಲ್ಲಿ ಯುಎಸ್ ಓಪನ್ ಟ್ರೋಫಿ ಜಯಿಸಿದ ಅತಿ ಹಿರಿಯ ಆಟಗಾರ ಎಂಬ ಸಾಧನೆಯೂ ಜೋಕೊವಿಕ್ ಅವರದಾಯಿತು.

ಸೆಮಿೈನಲ್‌ನಲ್ಲಿ ಟೂರ್ನಿಯ ಅಗ್ರ ಶ್ರೇಯಾಂಕಿತ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿ ೈನಲ್‌ಗೇರಿದ್ದ ಮೆಡ್ವೆಡೇವ್, ಇದೇ ಟೂರ್ನಿಯ 2021ರ ೈನಲ್‌ನಲ್ಲಿ ಜೋಕೊವಿಕ್‌ರನ್ನು ಮಣಿಸಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದರು. ಆದರೆ ಜೋಕೊ ಎರಡು ವರ್ಷದ ಬಳಿಕ ಮುಯ್ಯಿ ತೀರಿಸಿಕೊಂಡರು.

\https://twitter.com/usopen/status/1701026802078990591?s=20

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net