ಈ ಉಪಕ್ರಮದ ಹಿಂದಿನ ದೃಷ್ಟಿಕೋನವನ್ನು ವಿವರಿಸಿದ ದಿವ್ಯಶ್ರೀ ಡೆವಲಪರ್ಸ್‌ನ ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ವಿಭಾಗದ ಪ್ರೋಗ್ರಾಂ ಡೈರೆಕ್ಟರ್ ರುಚಿಕಾ ಭಾಸ್ಕರ್ ರಾಜು, "ದಿವ್ಯಶ್ರೀ ಸಂಸ್ಥೆಯಲ್ಲಿ ನಾವು ಕೇವಲ ಮೂಲಸೌಕರ್ಯಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಮೌಲ್ಯಯುತ ಅನುಭವಗಳನ್ನು ಸೃಷ್ಟಿಸುವಲ್ಲಿಯೂ ನಂಬಿಕೆ ಇಟ್ಟಿದ್ದೇವೆ. ಡಿಎನ್ಎಮ್ಆರ್ ಆ ತತ್ವದ ಪ್ರತಿಬಿಂಬವಾಗಿದ್ದು, ಪ್ರಕೃತಿ, ಸಮುದಾಯ ಮತ್ತು ಪ್ರಜ್ಞಾಪೂರ್ವಕ ಜೀವನಶೈಲಿಯನ್ನು ಬೆಸೆಯುತ್ತದೆ. ನಾವು ಎರಡನೇ ಆವೃತ್ತಿಗೆ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ಡಿಎನ್ಎಮ್ಆರ್ ಅನ್ನು ಭಾರತದಾದ್ಯಂತದ ಓಟಗಾರರನ್ನು ಸೆಳೆಯುವ 'ಲ್ಯಾಂಡ್‌ಮಾರ್ಕ್' ಕಾರ್ಯಕ್ರಮವಾಗಿ ಸ್ಥಾಪಿಸುವುದು ಹಾಗೂ ಬೆಂಗಳೂರಿನ ಪ್ರಮುಖ ವಾರ್ಷಿಕ ಕ್ರೀಡಾಕೂಟವಾಗಿ ವಿಕಸನಗೊಳಿಸುವುದು ನಮ್ಮ ಗುರಿಯಾಗಿದೆ" ಎಂದರು.