2003ರ ವಿಶ್ವಕಪ್ ತಂಡದ ಸದಸ್ಯ, ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ಬಿಜೆಪಿಗೆ ಸೇರ್ಪಡೆ

mongia web
Published on

ಮೊಹಾಲಿ: ಮಾಜಿ ಕ್ರಿಕೆಟಿಗ ಹಾಗೂ 2003ರ ಏಕದಿನ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ಸೌರವ್ ಗಂಗೂಲಿ ಸಾರಥ್ಯದ ಭಾರತ ತಂಡದ ಸದಸ್ಯ ದಿನೇಶ್ ಮೊಂಗಿಯಾ ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಮುಂಬರುವ ಪಂಜಾಬ್ ಚುನಾವಣೆಯಲ್ಲಿ 44 ವರ್ಷದ ದಿನೇಶ್ ಮೊಂಗಿಯಾ ಅವರು ಸ್ಪರ್ಧಿಸುವ ನಿರೀಕ್ಷೆ ಹರಡಿದೆ.

2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ದಿನೇಶ್ ಮೊಂಗಿಯಾ, ಭಾರತ ಪರ 57 ಏಕದಿನ ಪಂದ್ಯಗಳಲ್ಲಿ 1,230 ರನ್ ಬಾರಿಸಿದ್ದಾರೆ. 2002ರಲ್ಲಿ ಜಿಂಬಾಬ್ವೆ ವಿರುದ್ಧ ಗುವಾಹಟಿಯಲ್ಲಿ 159 ರನ್ ಸಿಡಿಸಿದ್ದು ಗರಿಷ್ಠವಾಗಿದೆ. ಭಾರತ ತಂಡ 2006ರಲ್ಲಿ ಆಡಿದ ಚೊಚ್ಚಲ ಟಿ20 ಪಂದ್ಯದಲ್ಲೂ ಅವರು ಆಡಿದ್ದರು ಮತ್ತು 38 ರನ್ ಬಾರಿಸಿದ್ದರು.

2003ರ ವಿಶ್ವಕಪ್‌ನಲ್ಲಿ ವಿವಿಎಸ್ ಲಕ್ಷ್ಮಣ್ ಬದಲಿಗೆ ಅಚ್ಚರಿಯ ರೀತಿಯಲ್ಲಿ ದಿನೇಶ್ ಮೊಂಗಿಯಾಗೆ ಸ್ಥಾನ ಕಲ್ಪಿಸಲಾಗಿತ್ತು. ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲ ಅವರ ಆಲ್ರೌಂಡ್ ಸಾಮರ್ಥ್ಯ ಇದಕ್ಕೆ ಕಾರಣವಾಗಿತ್ತು. 2007ರಲ್ಲಿ ಅವರು ಬಂಡಾಯ ಲೀಗ್ ಐಸಿಎಲ್‌ನಲ್ಲೂ ಆಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net