PHOTO | ಧೋನಿ ಅಭಿಮಾನಿಯ ಮನೆಗೆ ಸಿಎಸ್‌ಕೆ ಬಣ್ಣ! ಇದಕ್ಕೆ ಮಾಡಿದ ಖರ್ಚು ಎಷ್ಟು ಗೊತ್ತೇ?

dhoni csk web
Published on

ಚೆನ್ನೈ: ಸ್ಟಾರ್ ಕ್ರಿಕೆಟಿಗರಿಗರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವುದು ಸಾಮಾನ್ಯ. ಈ ಪೈಕಿ ಕೆಲ ಅಭಿಮಾನಿಗಳು ಕ್ರಿಕೆಟಿಗರಂತೆ ದೇವರಂತೆ ಆರಾಧಿಸುತ್ತಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಅಂಥ ಹಲವು ಅಭಿಮಾನಿಗಳ ಪೈಕಿ ಒಬ್ಬರಾಗಿರುವ ಚೆನ್ನೈ ನಿವಾಸಿ ಗೋಪಾಲಕೃಷ್ಣನ್, ವಿಶೇಷ ರೀತಿಯಲ್ಲಿ ಅಭಿಮಾನ ಮೆರೆದಿದ್ದಾರೆ. ಅವರ ಮನೆ ತುಂಬ ಈಗ ಧೋನಿಯೇ ತುಂಬಿಕೊಂಡಿದ್ದಾರೆ!

ಧೋನಿ ನೇತೃತ್ವದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಈ ಬಾರಿ ಐಪಿಎಲ್‌ನಲ್ಲಿ ನಿರೀಕ್ಷಿತ ನಿರ್ವಹಣೆ ತೋರುತ್ತಿಲ್ಲ. ಆದರೂ ಗೋಪಾಲಕೃಷ್ಣನ್ ಅಭಿಮಾನ ಕಡಿಮೆಯಾಗಿಲ್ಲ. ಸಿಎಸ್‌ಕೆ ತಂಡದ ಹಳದಿ ಬಣ್ಣವನ್ನು ತಮ್ಮ ಮನೆಗೆ ಬಳಿದುಕೊಂಡಿರುವ ಗೋಪಾಲಕೃಷ್ಣನ್, ‘ಧೋನಿ ಅಭಿಮಾನಿಯ ಮನೆ’ ಎಂದೂ ಬೋರ್ಡ್ ಹಾಕಿಕೊಂಡಿದ್ದಾರೆ. ಈ ಪೇಂಟಿಂಗ್‌ಗಾಗಿ ಅವರು 1.50 ಲಕ್ಷ ರೂ. ಖರ್ಚು ಮಾಡಿದ್ದಾರೆ.

ಮನೆ ಮುಂಭಾಗದ ಗೋಡೆ ಮೇಲೆ ಧೋನಿ ಚಿತ್ರವನ್ನು ಬರೆಸಿರುವ ಗೋಪಾಲಕೃಷ್ಣನ್, ಈ ಬಾರಿ ಐಪಿಎಲ್‌ನಲ್ಲಿ ಧೋನಿ ಆಟವನ್ನು ಕಣ್ಣಾರೆ ನೋಡಲು ಸಾಧ್ಯವಾಗದಿರುವುದಕ್ಕೆ ಬೇಸರಗೊಂಡಿದ್ದಾರೆ. ಧೋನಿ ಆಟವನ್ನು ಈಗ ಹಲವು ಮಂದಿ ಟೀಕಿಸುತ್ತಿದ್ದಾರೆ. ಹೀಗಾಗಿ ಮೈದಾನಕ್ಕೆ ಹೋಗಿ ಅವರನ್ನು ಹುರಿದುಂಬಿಸುವ ಅವಕಾಶ ಸಿಕ್ಕರೆ ಒಳ್ಳೆಯದಿತ್ತು. ಅವರ ತಂಡ ಸೋಲಲಿ-ಗೆಲ್ಲಲಿ, ನನ್ನ ಬೆಂಬಲ ಯಾವಾಗಲೂ ಅವರಿಗೆ ಇರುತ್ತದೆ ಎಂದು ಗೋಪಾಲಕೃಷ್ಣನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net