ಮ್ಯಾಜಿಕ್​ ಬ್ಯಾಟ್​ನಲ್ಲಿ ಆಡಿದರೇ ಹರ್ಮಾನ್​ಪ್ರೀತ್​ ಕೌರ್​? ಮುಂಬೈ ಗೆಲುವಿನ ಬಳಿಕ ಬ್ಯಾಟ್​ ಪರೀಕ್ಷಿಸಿದ ಮ್ಯಾಚ್​ ರೆಫ್ರಿ!

harman bat web
Published on

ನವದೆಹಲಿ: ಮುಂಬೈ ಇಂಡಿಯನ್ಸ್​ ನಾಯಕಿ ಹರ್ಮಾನ್​ಪ್ರೀತ್​ ಕೌರ್​ (95*) ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಶನಿವಾರ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊನೇ 6 ಓವರ್​ಗಳಲ್ಲಿ 91 ರನ್​ ಗಳಿಸಬೇಕಾಗಿದ್ದ ಸವಾಲನ್ನೂ ಲೆಕ್ಕಿಸದೆ, ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗೆಲುವು ತಂದರು. ಈ ಪೈಕಿ 75 ರನ್​ಗಳನ್ನು ಅವರೊಬ್ಬರೇ ಸಿಡಿಸಿದರು. ಅದರಲ್ಲಿ 8 ಬೌಂಡರಿ, 5 ಸಿಕ್ಸರ್​ಗಳೂ ಸೇರಿದ್ದವು. ಅವರ ಈ ಅತಿಮಾನುಷ ಆಟದ ಬಳಿಕ ಮ್ಯಾಚ್​ ರೆಫ್ರಿಗೆ ಹರ್ಮಾನ್​ಪ್ರೀತ್​ ಬ್ಯಾಟ್​ ಬಗ್ಗೆಯೇ ಅನುಮಾನ ಬಂದು ಅದನ್ನು ಪರಿಶೀಲನೆಗೆ ಒಳಪಡಿಸಿದರು.

ಹರ್ಮಾನ್​ ಈ ಸ್ಫೋಟಕ ಆಟಕ್ಕೆ ಮುನ್ನ ಬ್ಯಾಟ್​ ಬದಲಾವಣೆ ಮಾಡಿದ್ದರು. ಹೀಗಾಗಿ ಅನುಮಾನ ಸಹಜವಾಗಿತ್ತು. ಆದರೆ ತನ್ನ ಅಭ್ಯಾಸದ ಬ್ಯಾಟ್​ ಉತ್ತಮ ಗ್ರಿಪ್​ ಹೊಂದಿದ್ದ ಕಾರಣ ಅದನ್ನೇ ತರಿಸಿಕೊಂಡು ಬಿರುಸಿನ ಆಟಕ್ಕಿಳಿದೆ. ಅದು ಲ ನೀಡಿತು ಎಂದು ಹರ್ಮಾನ್​ಪ್ರೀತ್​ ಪಂದ್ಯದ ಬಳಿಕ ವಿವರಿಸಿದರು.

ಎಕ್ಲೆಸ್ಟೋನ್​, ಕಿರಣ್​ಗೆ ದಂಡ

ಯುಪಿ ವಾರಿಯರ್ಸ್​ ತಂಡದ ಆಟಗಾರ್ತಿಯರಾದ ಸೋಫಿ ಎಕ್ಲೆಸ್ಟೋನ್​ ಮತ್ತು ಕಿರಣ್​ ನವಿಗೆರೆ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಭಾನುವಾರ ನಡೆದ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿರುವ ತಪ್ಪಿಗಾಗಿ ಪಂದ್ಯ ಸಂಭಾವನೆಯ ಶೇ. 10 ದಂಡ ಶಿಕ್ಷೆಗೆ ಗುರಿಯಾಗಿದ್ದಾರೆ. ಡಬ್ಲ್ಯುಪಿಎಲ್​ ನೀತಿ ಸಂಹಿತೆಯ 2.2 ವಿಧಿಯನ್ನು ಅವರಿಬ್ಬರು ಉಲ್ಲಂಘಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಅವರಿಬ್ಬರು ಮಾಡಿರುವ ತಪ್ಪು ಏನೆಂದು ಬಿಸಿಸಿಐ ನಿಖರವಾಗಿ ತಿಳಿಸಿಲ್ಲ. ಆದರೆ ಅದು ಉಲ್ಲೇಖಿಸಿರುವ ನೀತಿಸಂಹಿತೆಯ ವಿಧಿಯು ಕ್ರಿಕೆಟ್​ ಪರಿಕರ, ಉಡುಪು, ಮೈದಾನದ ಪರಿಕರಗಳಿಗೆ ಸಂಬಂಧಿಸಿದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net