

ಮ್ಯಾಡ್ರಿಡ್: ವಿಶ್ವ ನಂ. 1 ಟೆನಿಸ್ ಆಟಗಾರ ನೊವಾಕ್ ಜೋಕೊವಿಕ್ ಸ್ಪೇನ್ನಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ವಿವಾದಕ್ಕೀಡಾಗಿದ್ದಾರೆ. ಸ್ಪೇನ್ನಲ್ಲೇ ದಿಗ್ಬಂಧನದಲ್ಲಿದ್ದ ಸೆರ್ಬಿಯಾದ ಜೋಕೋ, ಟೆನಿಸ್ ಕ್ಲಬ್ ಒಂದರ ಕ್ಲೇಕೋರ್ಟ್ನಲ್ಲಿ ಆಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಜತೆಗೆ ‘ಕ್ಲೇಕೋರ್ಟ್ನಲ್ಲಿ ಆಡಿ ಖುಷಿಯಾಯಿತು’ ಎಂದು ಬರೆದುಕೊಂಡಿದ್ದಾರೆ. ಸ್ಪೇನ್ನಲ್ಲಿ ಸೋಮವಾರದಿಂದ ಲಾಕ್ಡೌನ್ ನಿಯಮವನ್ನು ಸ್ವಲ್ಪ ಸಡಿಲಿಕೆ ಮಾಡಲಾಗಿದ್ದು, ಪ್ರಮುಖ ಕ್ರೀಡಾಪಟುಗಳ ತರಬೇತಿಗೂ ಅವಕಾಶ ಕಲ್ಪಿಸಲಾಗಿದೆ.
ಆದರೆ ಮೈದಾನಕ್ಕಿಳಿದು ಆಡುವಂತಿರಲಿಲ್ಲ. ಇದಕ್ಕೆ ಮುಂದಿನ ವಾರದವರೆಗೆ ಕಾಯುವಂತೆ ಸ್ಪೇನ್ ಸರ್ಕಾರ ಸೂಚಿಸಿದೆ. ಸ್ಪೇನ್ನಲ್ಲಿ ಮಾ. 14ರಿಂದ ಲಾಕ್ಡೌನ್ ಜಾರಿಯಲ್ಲಿದೆ. -ಪಿಟಿಐ