ವಿರಾಟ್ ಕೊಹ್ಲಿ ಔಟ್ ಆಗಿದ್ದು ನೋಡಿ 14 ವರ್ಷದ ಬಾಲಕಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವು! Girl Suffer Heart Attack After Virat Kohli Dismissal

Girl Suffer Heart Attack After Virat Kohli Dismissal
Published on

Girl Suffer Heart Attack After Virat Kohli Dismissal: ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗಿದ್ದನ್ನು ನೋಡಿ ಉತ್ತರ ಪ್ರದೇಶದ 14 ವರ್ಷದ ಬಾಲಕಿ  ಹೃದಯಾಘಾತದಿಂದ ಕುಸಿದು ಬಿದ್ದು   ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.  ಆದರೆ ಈಗ, ಈ ಸುದ್ದಿಯ ಹಿಂದಿನ ಸತ್ಯವನ್ನು  ಕುಟುಂಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಸಂಜೆ ಉತ್ತರ ಪ್ರದೇಶದ ಡಿಯೋರಿಯಾದ  ಪ್ರಿಯಾಂಶಿ ಪಾಂಡೆ, ವಕೀಲ ಅಜಯ್ ಪಾಂಡೆ ಅವರ ಪುತ್ರಿ. ಪ್ರಿಯಾಂಶಿ ತನ್ನ ಕುಟುಂಬದೊಂದಿಗೆ ಅಂತಿಮ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ಹರಡಿತು. ವಿರಾಟ್ ಕೊಹ್ಲಿ ಬಂದು ಒಂದು ರನ್ ಗಳಿಸಿ ಔಟಾದ ನಂತರ ಪ್ರಿಯಾಂಶಿ ಕುಸಿದು ಬಿದ್ದು ಸಾವನ್ನಪ್ಪಿದರು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿತ್ತು.

ವೈದ್ಯರು ಕೂಡ ಸಾವಿಗೆ ಹೃದಯಾಘಾತವೇ ಕಾರಣ ಎಂದು ದೃಢಪಡಿಸಿದರು. ಆದರೆ, ಆ ಹುಡುಗಿಯ ಸಾವಿಗೆ ವಿರಾಟ್ ಕೊಹ್ಲಿಯ ಜೌಟ್​ ಆಗಿರುವುದು ಕಾರಣವಲ್ಲ ಎಂದು ತಿಳಿದುಬಂದಿದೆ.

ಹುಡುಗಿಯ ತಂದೆ ಅಜಯ್ ಪಾಂಡೆ, ನ್ಯೂಜಿಲೆಂಡ್ ಬ್ಯಾಟಿಂಗ್ ಮುಗಿಸಿದ ನಂತರ , ಭಾರತ ಬ್ಯಾಟಿಂಗ್ ಆರಂಭಿಸಿದಾಗ, ಮಗಳು ಕುಟುಂಬದ ಉಳಿದವರೊಂದಿಗೆ ಆಟವನ್ನು ವೀಕ್ಷಿಸಿದಳು. ಅಷ್ಟರಲ್ಲಿ ಪ್ರಿಯಾಂಶಿ ಪ್ರಜ್ಞೆ ತಪ್ಪಿ ಬಿದ್ದಳು.  ನಂತರ ಆಕೆಯನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದರೆ ಆಕೆಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಇದಾದ ನಂತರ, ಪ್ರಿಯಾಂಶಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ಮಾಡಲಾಯಿತು.

ಆದರೆ, ಕೊಹ್ಲಿಯ  ಜೌಟ್​ ಆಗಿರುವುದಕ್ಕೂ  ಮಗಳ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ತಂದೆ ಹೇಳುತ್ತಾರೆ. ಪ್ರತ್ಯಕ್ಷದರ್ಶಿ ನೆರೆಯ ಅಮಿತ್ ಚಂದ್ರ ಕೂಡ ಇದನ್ನು ದೃಢಪಡಿಸುತ್ತಾರೆ. ಘಟನೆ ನಡೆದ ಸಮಯದಲ್ಲಿ ಅವನು ಕೂಡ ಅಲ್ಲೇ ಇದ್ದನೆಂದು ನೆರೆಹೊರೆಯವರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net