ಧೋನಿ ಪತ್ನಿ ಸಾಕ್ಷಿ ಸಿಟ್ಟಾಗಿದ್ದು ಯಾಕೆ...

Dhoni-advises-web
Published on

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಗೆ ‘ನಿವೃತ್ತಿಯ ಮಾತು’ ಹೊಸದೇನಲ್ಲ. ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕ ವೃತ್ತಿ ಜೀವನದಲ್ಲಿ ಸಂಧ್ಯಾಕಾಲದಲಿದ್ದಾರೆ. ಕಳೆದ ಜುಲೈನಲ್ಲಿ ನ್ಯೂಜಿಲೆಂಡ್ ಎದುರು ಏಕದಿನ ವಿಶ್ವಕಪ್ ಸೆಮಿೈನಲ್‌ನಲ್ಲಿ ಭಾರತ ಸೋತ ದಿನದಂದಲೂ ಎಲ್ಲೆಡೆ ಧೋನಿ ನಿವೃತ್ತಿ ಕುರಿತು ಸಾಕಷ್ಟು ಚರ್ಚೆ ನಡೆದಿವೆ. ಈಗಲೂ ನಡೆಯುತ್ತಿವೆ. ಇದರಿಂದ ರೋಸಿ ಹೋಗಿರುವ ಧೋನಿ ಪತ್ನಿ, ನಿವೃತ್ತಿ ಕುರಿತು ಗಾಳಿ ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಎನಿಸಿರುವ ಎಂಎಸ್ ಧೋನಿ ಕಳೆದ 15 ವರ್ಷಗಳಿಂದಲ್ಲೂ ರಾಷ್ಟ್ರೀಯ ತಂಡದ ಅಂಗವಾಗಿದ್ದಾರೆ. ಅದೆಷ್ಟೋ ಸರಣಿಗಳನ್ನು ಭಾರತ ಮುಡಿಗೇರಿಸುವಲ್ಲಿ ಧೋನಿ ಪಾತ್ರ ಪ್ರಮುಖ. ವಿಕೆಟ್ ಕೀಪಿಂಗ್ ಜತೆಗೆ ಸಹ ಆಟಗಾರಿಗೆ ಪ್ರೋತ್ಸಾಹ ನೀಡುವುದರಲ್ಲಿ ಧೋನಿ ಅಚ್ಚುಮೆಚ್ಚು. ಈಗಾಗಲೇ ಟೆಸ್ಟ್ ಸರಣಿಯಿಂದ ನಿವೃತ್ತಿ ೋಷಿಸಿರುವ 38 ವರ್ಷದ ಧೋನಿ ಏಕದಿನ ಹಾಗೂ ಟಿ20 ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಸ್ವತಃ ಧೋನಿ ಯಾವುದೇ ಗುಟ್ಟು ಬಿಡುಕೊಡದಿದ್ದರೂ ಗಾಳಿಸುದ್ದಿಗಳು ಮಾತ್ರ ನಿಂತಿಲ್ಲ. ಇದರಿಂದ ಕೆರಳಿಸಿರುವ ಸಾಕ್ಷಿ ಸಿಂಗ್, ‘ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಕುಳಿತವರು, ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಹೀಗಾಗಿ ಧೋನಿ ನಿವೃತ್ತಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಇದಾದ ಕೆಲ ಹೊತ್ತಿನಲ್ಲೇ ಟ್ವೀಟ್‌ಅನ್ನು ಡಿಲೀಟ್ ಮಾಡಿದ್ದಾರೆ.

ಐಪಿಎಲ್ ಮೂಲಕ ಧೋನಿ ವೃತ್ತಿಪರ ಜೀವನಕ್ಕೆ ವಾಪಸಾಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಐಪಿಎಲ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. ಇದರಿಂದ ಧೋನಿ ಭವಿಷ್ಯ ಕೂಡ ಮಂಕಾಗಿದ್ದು, ಮುಂದೆ ಐಪಿಎಲ್ ನಡೆದರಷ್ಟೇ ಮಾಜಿ ನಾಯಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net