VIDEO| ಡೊನಾಲ್ಡ್​ ಟ್ರಂಪ್​ ಜತೆ ಗಾಲ್ಫ್​ ಆಡಿದ ಧೋನಿ; ವಿಡಿಯೋ ವೈರಲ್​

dhoni trump web
Published on

ನ್ಯೂಯಾರ್ಕ್​: ಟೀಮ್​ ಇಂಡಿಯಾದ ಮಾಜಿ ನಾಯಕ ಎಂಎಸ್​ ಧೋನಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆಗೆ ಸೌಹಾರ್ದಯುತ ಗಾಲ್ಫ್​ ಪಂದ್ಯವಾಡಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಧೋನಿ, ಟ್ರಂಪ್​ ಆಹ್ವಾನದ ಮೇರೆಗೆ ಟ್ರಂಪ್​ ನ್ಯಾಷನಲ್​ ಗಾಲ್ಫ್​ ಕ್ಲಬ್​ಗೆ ತೆರಳಿ ಗಾಲ್ಫ್​ ಆಡಿದ್ದಾರೆ. ಇದರ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ ಮುನ್ನ ಯುಎಸ್​ ಓಪನ್​ ಟೂರ್ನಿಗೂ ಹಾಜರಾಗಿದ್ದ ಧೋನಿ, ಅಲ್ಕರಾಜ್​-ಜ್ವೆರೇವ್​ ನಡುವಿನ ಕ್ವಾರ್ಟರ್​ಫೈನಲ್​​ ಪಂದ್ಯ ವೀಕ್ಷಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net