ಮಾರ್ಚ್ 2ರಿಂದ ಐಪಿಎಲ್​ಗೆ ಅಭ್ಯಾಸ

dhoni
Published on

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ಮಾರ್ಚ್ 2ರಂದು 13ನೇ ಆವೃತ್ತಿಯ ಐಪಿಎಲ್​ಗೆ ಅಭ್ಯಾಸ ಆರಂಭಿಸಲಿದ್ದಾರೆ. 38 ವರ್ಷದ ಧೋನಿ ಕಳೆದ ಜೂನ್-ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಧೋನಿ ಅಭ್ಯಾಸ ನಡೆಸಲಿದ್ದಾರೆ. ಮಾರ್ಚ್ 19ರಂದು ತಂಡದ ಪೂರ್ವ ಸಿದ್ಧತಾ ಶಿಬಿರ ಆರಂಭವಾಗಲಿದೆ ಎಂದು ಸಿಎಸ್​ಕೆ ಸಿಇಒ ಕೆ.ಎಸ್.ವಿಶ್ವನಾಥನ್ ತಿಳಿಸಿದ್ದಾರೆ. ಎಂಎಸ್ ಧೋನಿ, ಅಂಬಟಿ ರಾಯುಡು ಹಾಗೂ ಸುರೇಶ್ ರೈನಾ ಜತೆಗೂಡಿ ಶಿಬಿರ ಆರಂಭಕ್ಕೂ ಎರಡೂ ವಾರ ಮೊದಲೇ ಅಭ್ಯಾಸ ಆರಂಭಿಸಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net