

Dhoni | ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ನಾಯಕ, ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಎಂಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದು ಈಗಾಗಲೇ ಆರು ವರ್ಷ ಕಳೆದಿದೆ. ಧೋನಿ ಕ್ರಿಕೆಟ್‌ನಿಂದ ಅಂತರ ಕಾಯ್ದುಕೊಂಡಿದ್ದರೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಮಾತ್ರ ನಿವೃತ್ತಿ ಪಡೆದಿಲ್ಲ. ಕಳೆದ ವರ್ಷ ನಡೆದ ಐಪಿಎಲ್ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಅಲ್ಲೇ ಉಳಿಸಿಕೊಂಡಿತ್ತು. ಇದೀಗ ಧೋನಿ ತಮ್ಮ 43 ನೇ ವಯಸ್ಸಿನಲ್ಲಿ, ಮೊದಲ ಬಾರಿಗೆ 'ಅನ್‌ಕ್ಯಾಪ್ಡ್ ಪ್ಲೇಯರ್' ಆಗಿ ಐಪಿಎಲ್ 2025ರಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ.
ಪ್ರತಿ ಪಂದ್ಯಾವಳಿ ನಡೆಯುವಾಗಲೂ ಎಂ.ಎಸ್ ಧೋನಿ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತೆ. ಆದರೂ ಸಹ ಧೋನಿ ಮಾತ್ರ ನಿರಂತರವಾಗಿ ಸಿಎಸ್‌ಕೆ ಪರ ಕಣಕ್ಕಿಳಿಯುತ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಥಾನಾಯಕ ಆಗಿರುವ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ನಿವೃತ್ತಿ ಹೊಂದುವಿರಾ ಎಂಬ ಪ್ರಶ್ನೆಗೆ ಸ್ವತಃ ಅವರೆ ಈಗ ಸ್ಪಷ್ಟನೆ ನೀಡಿದ್ದಾರೆ.
2025ರ ಐಪಿಎಲ್ ವೃತ್ತಿಯಲ್ಲಿ ಸಿಎಸ್‌ಕೆ ತಂಡದ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ನನ್ನ ಪ್ರಾಂಚೈಸಿ ಆಗಿರುವ ಸಿಎಸ್‌ಕೆ ಪರ ನಾನು ಎಷ್ಟು ಸಲ ಬೇಕಾದರೂ ಆಡಬಲ್ಲೆ. ನಾನು ವ್ಹೀಲ್‌ಚೇರ್‌ನಲ್ಲಿದ್ದರೂ ಸಹ ಸಿಎಸ್‌ಕೆ ನನ್ನನ್ನು ಎಳೆದುಕೊಂಡು ಹೋಗುತ್ತದೆ. ಸಿಎಸ್‌ಕೆ ನನ್ನ ಪ್ರೀತಿಯ ಫ್ರಾಂಚೈಸಿ ಎಂದಿದ್ದು, ಅವರಿನ್ನೂ ನಿವೃತ್ತಿ ಹೊಂದುವ ಯಾವುದೇ ಯೋಜನೆಯನ್ನು ರೂಪಿಸಿಕೊಂಡಿಲ್ಲ ಎಂಬುದು ಅವರ ಮಾತಿನ ಅರ್ಥವನ್ನು ಸೂಚಿಸುತ್ತದೆ.
ಒಟ್ಟಿನಲ್ಲಿ ಧೋನಿ ಫಿಟ್ನೆಸ್ ಕಾಯ್ದುಕೊಂಡರೆ 2026 ರ ಐಪಿಎಲ್ನಲ್ಲಿಯೂ ಮುಂದುವರೆಯೋ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರುತುರಾಜ್ ಗಾಯಕ್ವಾಡ್, ಸಚಿನ್ ತೆಂಡೂಲ್ಕರ್ಗೆ 50 ವರ್ಷ ವಯಸ್ಸಾಗಿದೆ. ಆದರೂ ಸಹ ಅವರು ತಮ್ಮ 50ನೇ ವಯಸ್ಸಿನಲ್ಲಿಯೂ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ಧೋನಿಗೆ ಇನ್ನೂ ಹಲವು ವರ್ಷಗಳು ಬಾಕಿ ಇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.