ಪಡಿಕಲ್ ಶತಕ, ಮಯಾಂಕ್ ಬಳಗ ಅಜೇಯ ಓಟ: ಚಂಡೀಗಢ ಎದುರು 2 ರನ್ ಜಯ, ಅಗ್ರಸ್ಥಾನಕ್ಕೆ ನಾಳೆ ಕಾದಾಟ

New-Project-4
Published on

ಅಹಮದಾಬಾದ್: ಎಡಗೈ ಬ್ಯಾಟರ್ ದೇವದತ್ ಪಡಿಕಲ್ (114 ರನ್, 103 ಎಸೆತ, 9 ಬೌಂಡರಿ, 6 ಸಿಕ್ಸರ್) ಟೂರ್ನಿಯ 2ನೇ ಶತಕ ಹಾಗೂ ನಿಕಿನ್ ಜೋಸ್ (96 ರನ್, 114 ಎಸೆತ, 6 ಬೌಂಡರಿ, 1 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಚಂಡೀಗಢ ಎದುರು 22 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮಯಾಂಕ್ ಅಗರ್ವಾಲ್ ಬಳಗ ಸತತ 5ನೇ ಪಂದ್ಯದಲ್ಲೂ ಅಜೇಯ ಓಟ ಮುಂದುವರಿಸಿದೆ.

ಶುಕ್ರವಾರ ನಡೆದ ಸಿ ಗುಂಪಿನ ತನ್ನ 5ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಕರ್ನಾಟಕ 6 ವಿಕೆಟ್‌ಗೆ 299 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಆರಂಭಿಕ ಅರ್ಸ್ಲಾನ್ ಖಾನ್ (102 ರನ್, 103 ಎಸೆತ, 11 ಬೌಂಡರಿ, 1 ಸಿಕ್ಸರ್) ಶತಕದ ಪ್ರತಿರೋಧ ನಡುವೆಯೂ ಪಂಜಾಬ್ 7 ವಿಕೆಟ್‌ಗೆ 277 ರನ್‌ಗಳಿಸಲಷ್ಟೇ ಶಕ್ತವಾಯಿತು.

ಕರ್ನಾಟಕ: 6 ವಿಕೆಟ್‌ಗೆ 299 (ಆರ್. ಸಮರ್ಥ್ 5, ಮಯಾಂಕ್ 19, ಪಡಿಕಲ್ 114, ನಿಕಿನ್ ಜೋಸ್ 96, ಮನೀಷ್ ಪಾಂಡೆ 53*, ಬಿಆರ್ ಶರತ್ 1*, ಮಂದೀಪ್ ಸಿಂಗ್ 31ಕ್ಕೆ2, ಸಂದೀಪ್ ಶರ್ಮ 52ಕ್ಕೆ2).

ಚಂಡೀಗಢ: 7 ವಿಕೆಟ್‌ಗೆ 277 (ಅರ್ಸ್ಲಾನ್ ಖಾನ್ 102, ವೋಹ್ರಾ 34, ಅಂಕಿತ್ 51, ಭಗಮೆಂದರ್ 32, ಕರನ್ 20, ವಿ.ಕೌಶಿಕ್ 44ಕ್ಕೆ2, ಕೆ.ಗೌತಮ್ 36ಕ್ಕೆ1).

ಪಡಿಕಲ್-ಜೋಸ್ ಭರ್ಜರಿ ಜತೆಯಾಟ: ನಾಯಕ ಮಯಾಂಕ್ ಅಗರ್ವಾಲ್ (19) ಹಾಗೂ ಆರ್. ಸಮರ್ಥ್ (5) ಜೋಡಿ ಮತ್ತೊಮ್ಮೆ ಉತ್ತಮ ಆರಂಭ ಒದಗಿಸುವಲ್ಲಿ ವಿಲವಾಯಿತು. ಬಳಿಕ 3ನೇ ವಿಕೆಟ್‌ಗೆ ಜತೆಯಾದ ಯುವ ಬ್ಯಾಟರ್‌ಗಳಾದ ದೇವದತ್ ಪಡಿಕಲ್ ಹಾಗೂ ನಿಕಿನ್ ಜೋಸ್ ಭರ್ಜರಿ ಜತೆಯಾಟ ಮೂಲಕ ಚೇತರಿಕೆ ನೀಡಿದರು. ಚಂಡೀಗಢ ಬೌಲರ್‌ಗಳನ್ನು ಸರಾಗವಾಗಿ ದಂಡಿಸಿದ ಈ ಜೋಡಿ 174 ಎಸೆತಗಳಲ್ಲಿ 171 ರನ್ ಕಸಿಯಿತು. ಚಂಡೀಗಢಕ್ಕೆ ಸವಾಲಾಗುತ್ತ ಸಾಗಿದ ದೇವದತ್ ಪಡಿಕಲ್ ಟೂರ್ನಿಯಲ್ಲಿ ಸತತ 5ನೇ ಬಾರಿಗೆ 70 ಪ್ಲಸ್ ರನ್ ಕಲೆಹಾಕಿ ಹಾಲಿ ಟೂರ್ನಿಯಲ್ಲಿ ಭರ್ಜರಿ ಾರ್ಮ್ ಮುಂದುವರಿಸಿದರು. 4ನೇ ವಿಕೆಟ್‌ಗೆ ನಿಕಿನ್ ಜೋಸ್ ಹಾಗೂ ಅನುಭವಿ ಮನೀಷ್ ಪಾಂಡೆ (53* ರನ್, 48 ಎಸೆತ, 3 ಸಿಕ್ಸರ್) ಜೋಡಿ 67 ರನ್ ಕಲೆಹಾಕಿತು. ಕೇವಲ 4 ರನ್‌ಗಳಿಂದ ನಿಕಿನ್ ಶತಕ ವಂಚಿತರಾದರು.

ಕರ್ನಾಟಕ ಮುಂದಿನ ಪಂದ್ಯ

ಎದುರಾಳಿ: ಹರಿಯಾಣ

ಯಾವಾಗ: ಭಾನುವಾರ

ಆರಂಭ: ಬೆಳಗ್ಗೆ 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net