GT vs DC, IPL 2024: ಅಬ್ಬರಿಸದ ಗಿಲ್​ ಪಡೆ, ಕೇವಲ 89ಕ್ಕೆ ಆಲ್​ ಔಟ್​​! ಡೆಲ್ಲಿಗೆ ಸುಲಭ ಗೆಲುವು

WhatsApp Image 2024-04-17 at 10.37.31 PM
Published on

ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಗುಜರಾತ್ ಟೈಟನ್ಸ್​ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (92/4) 6 ವಿಕೆಟ್ ಅಂತರದಿಂದ ಗುಜರಾತ್ ಟೈಟಾನ್ಸ್ (89) ತಂಡವನ್ನು ಮಣಿಸಿದೆ.

ಅಂತಿಮ ಫಲಿತಾಂಶ: ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಮೂಲಕ ಪೈಪೋಟಿ ಕೊಡಲು ಮುಂದಾದ ಗುಜರಾತ್ ಟೈಟಾನ್ಸ್ ಕೇವಲ 89 ರನ್​ಗಳನ್ನು ಕಲೆಹಾಕುವಲ್ಲಿ ಮಾತ್ರ ಶಕ್ತವಾಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ, ಕೇವಲ 6 ವಿಕೆಟ್‌ಗಳ ಅಂತರದಿಂದ 8.5 ಓವರ್​​ಗಳಲ್ಲೇ ಪಂದ್ಯವನ್ನು ಗೆಲುವಿನ ಮೂಲಕ ಮುಗಿಸಿತು.

ಮಿಡ್-ಇನಿಂಗ್ಸ್ ಸ್ಕೋರ್:
ಸಂಕ್ಷಿಪ್ತ ಸ್ಕೋರ್ -ಗುಜರಾತ್ ಟೈಟಾನ್ಸ್ 89-17.3 ಓವರ್‌ಗಳಲ್ಲಿ ಆಲೌಟ್. ರಶೀದ್ ಖಾನ್ 31, ಮುಖೇಶ್ 3/14, ಇಶಾಂತ್ 2/8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net