ರಾಜಸ್ಥಾನ ರಾಯಲ್ಸ್ ಎದುರು ಡೆಲ್ಲಿ ತಂಡಕ್ಕೆ 46 ರನ್‌ಗಳ ಜಯ

delhi capitals win -1
Published on

ಶಾರ್ಜಾ: ಆಲ್ರೌಂಡ್ ನಿರ್ವಹಣೆ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-13ರಲ್ಲಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ 46 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು. ಇದರೊಂದಿಗೆ ಲೀಗ್‌ನಲ್ಲಿ 5ನೇ ಜಯ ಕಂಡ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ತಂಡ ಸತತ 4ನೇ ಸೋಲು ಕಂಡಿತು. ಶಾರ್ಜಾದಲ್ಲಿ ಆಡಿದ ಮೊದಲ 2 ಪಂದ್ಯಗಳಲ್ಲಿ ಜಯಿಸಿದ್ದ ಸ್ಟೀವನ್ ಸ್ಮಿತ್ ಪಡೆ ಈ ಬಾರಿ ತನ್ನ ಅದೃಷ್ಟದ ಮೈದಾನದಲ್ಲೂ ಎಡವಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್‌ಗೆ 184 ರನ್ ಪೇರಿಸಿತು. ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ 19.4 ಓವರ್‌ಗಳಲ್ಲಿ 138 ರನ್‌ಗಳಿಗೆ ಸರ್ವಪತನ ಕಂಡಿತು.

ಡೆಲ್ಲಿ ಕ್ಯಾಪಿಟಲ್ಸ್: 8 ವಿಕೆಟ್‌ಗೆ 184 (ಮಾರ್ಕಸ್ ಸ್ಟೋಯಿನಿಸ್ 39, ಶಿಮ್ರೋನ್ ಹೆಟ್ಮೆಯರ್ 45, ಹರ್ಷಲ್ ಪಟೇಲ್ 16, ಜ್ರೋಾ ಆರ್ಚರ್ 24ಕ್ಕೆ 4, ಕಾರ್ತಿಕ್ ತ್ಯಾಗಿ 35ಕ್ಕೆ 1, ತೆವಾಟಿಯಾ 20ಕ್ಕೆ 1), ರಾಜಸ್ಥಾನ ರಾಯಲ್ಸ್: 19.4 ಓವರ್‌ಗಳಲ್ಲಿ 138 (ಯಶಸ್ವಿ ಜೈಸ್ವಾಲ್ 34, ಸ್ಟೀವನ್ ಸ್ಮಿತ್ 24, ರಾಹುಲ್ ತೆವಾಟಿಯಾ 38, ಕಗಿಸೊ ರಬಾಡ 35ಕ್ಕೆ 3, ಆರ್.ಅಶ್ವಿನ್ 22ಕ್ಕೆ 2, ಸ್ಟೋಯಿನಿಸ್ 17ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net