'ಟೀಮ್ ಇಂಡಿಯಾ' ಎಂಬ ಬಿಸಿಸಿಐ ಬಳಕೆ ತಪ್ಪು!? ಪಿಐಎಲ್​ ಅರ್ಜಿ ವಜಾಗೊಳಿಸುವ ಮುನ್ನ ದೆಹಲಿ ಹೈಕೋರ್ಟ್ ತಪರಾಕಿ | Team India

ವಿಜಯವಾಣಿ (9)
Published on

Team India: ಪ್ರಸಾರ ಭಾರತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ತಪರಾಕಿ ಹಾಕುವ ಮೂಲಕ ಅರ್ಜಿಯನ್ನು ವಜಾಗೊಳಿಸಿದೆ.

'ಟೀಮ್ ಇಂಡಿಯಾ' ಪದ ಬಳಕೆ ತಪ್ಪು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ವಹಿಸುವ ತಂಡವನ್ನು ಟೀಮ್ ಇಂಡಿಯಾ ಅಥವಾ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡ ಎಂದು ಉಲ್ಲೇಖಿಸಿದ್ದನ್ನು ಪ್ರಶ್ನಿಸಿ ಪಿಐಎಲ್​ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠವು, "ಇದು ನಿಮಗೆ ಮತ್ತು ನಮಗೆ ಸಮಯ ವ್ಯರ್ಥ" ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿತು.

ವಕೀಲ ರೀಪಕ್ ಕನ್ಸಾಲ್ ಅವರು ಪಿಐಎಲ್ ಸಲ್ಲಿಸಿದ್ದು, ಬಿಸಿಸಿಐ ಒಂದು ಖಾಸಗಿ ಸಂಸ್ಥೆಯಾಗಿದೆ. ಭಾರತ ಸರ್ಕಾರದೊಂದಿಗೆ ಯಾವುದೇ ಸಂಬಂಧವಿಲ್ಲ, ಆದ್ದರಿಂದ, ಅದು ನಿರ್ವಹಿಸುವ ತಂಡವನ್ನು ರಾಷ್ಟ್ರೀಯ ತಂಡ ಎಂದು ಕರೆಯುವುದು ತಪ್ಪುದಾರಿಗೆಳೆಯುವಂತಿದೆ ಎಂದು ವಾದಿಸಿ, ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕೋರ್ಟ್ ತಪರಾಕಿ

ಈ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ತಪರಾಕಿ ಹಾಕಿದ ದೆಹಲಿ ಹೈಕೋರ್ಟ್, ಅರ್ಜಿದಾರರಿಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಯಮಗಳ ಬಗ್ಗೆ ತಿಳಿದಿದೆಯೇ. ಆ ಸಮಿತಿಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಹಸ್ತಕ್ಷೇಪ ಇರಬಾರದು ಎಂಬುದು ನಿಮ್ಮ ನೀತಿಯೇ? ಇದರಿಂದ ನಿಮ್ಮ ಮತ್ತು ನಮ್ಮ ಸಮಯ ವ್ಯರ್ಥ. ಸರಿಯಾದ ಅರ್ಜಿಯನ್ನು ಸಲ್ಲಿಸಿ ಎಂದು ವಕೀಲ ರೀಪಕ್ ಕನ್ಸಾಲ್​ಗೆ ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net