ಗೆಲುವಿನ ಹಳಿ ಏರಲು ಡೆಲ್ಲಿ-ರಾಜಸ್ಥಾನ ಕಾದಾಟ:ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕೆಎಲ್ ರಾಹುಲ್ ಮುಖಾಮುಖಿ

New Project (1)
Published on

ನವದೆಹಲಿ: ಗೆಲುವಿನ ಸನಿಹದಲ್ಲಿ ಮುಗ್ಗರಿಸಿರುವ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಹಿಂದಿನ ಎರಡೂ ಪಂದ್ಯಗಳಲ್ಲಿ ಸೋಲುಂಡಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಬುಧವಾರ ಮುಖಾಮುಖಿ ಆಗಲಿವೆ. ತವರಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಲು ಅಕ್ಷರ್ ಪಟೇಲ್ ಪಡೆ ಹೋರಾಡಲಿದೆ. ರಾಜಸ್ಥಾನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕೆಎಲ್ ರಾಹುಲ್ ಮುಖಾಮುಖಿಯೂ ಇದಾಗಿರಲಿದೆ.

ಟೂರ್ನಿಯಲ್ಲಿ ಕನಸಿನ ಆರಂಭ ಪಡೆದಿರುವ ಡೆಲ್ಲಿ ತಂಡ, ಐಪಿಎಲ್ ಇತಿಹಾಸದಲ್ಲಿ ತನ್ನ ಆರಂಭಿಕ 5 ಪಂದ್ಯ ಗೆದ್ದ ತಂಡ ಎಂಬ ದಾಖಲೆಯಿಂದ ವಂಚಿತವಾಗಿದೆ. ಜತೆಗೆ ಅಗ್ರಸ್ಥಾನದಿಂದಲೂ ಕೆಳಗಿಳಿಯಿತು. ಡೆಲ್ಲಿ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 1ರಲ್ಲಿ ಸೋತು ಒಟ್ಟು 8 ಅಂಕ ಹೊಂದಿದೆ. ಉದ್ಘಾಟನಾ ಆವೃತ್ತಿಯ ಬಳಿಕ ಪ್ರಶಸ್ತಿ ಜಯಿಸುವಲ್ಲಿ ವಿಲವಾಗಿರುವ ರಾಜಸ್ಥಾನ ರಾಯಲ್ಸ್ ಹಾಲಿ ಆವೃತ್ತಿಯಲ್ಲಿ ಇದುವರೆಗೆ ಅಸ್ಥಿರ ನಿರ್ವಹಣೆ ಹೊಂದಿದೆ. ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು, 4 ಸೋಲಿನೊಂದಿಗೆ 4 ಪಾಯಿಂಟ್ ಹೊಂದಿದ್ದು, ಅಂಕಪಟ್ಟಿಯ 8ನೇ ಸ್ಥಾನದಲ್ಲಿದೆ. ಸ್ಯಾಮ್ಸನ್ ಪಡೆ ಮುಂದಿನ ಹಾದಿ ಸುಲಭಗೊಳಿಸಲು ಪರಿಣಾಮಕಾರಿ ನಿರ್ವಹಣೆ ಅಗತ್ಯವೆನಿಸಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನವರೆಗೂ ಬಲಿಷ್ಠ ಎನಿಸಿದ್ದ ಡೆಲ್ಲಿ ಬ್ಯಾಟಿಂಗ್ ವಿಭಾಗ ಲಯಕ್ಕೆ ಮರಳಬೇಕಿದೆ. ಕನ್ನಡಿಗ ಕರುಣ್ ನಾಯರ್ ಹಿಂದಿನ ಇನಿಂಗ್ಸ್ ಡೆಲ್ಲಿ ತಂಡದ ಬಲ ಹೆಚ್ಚಿಸಿದರೂ, ಟೂರ್ನಿಯಲ್ಲಿ ಯಶಸ್ವಿ ಆರಂಭಿಕ ಜೋಡಿ ಕಂಡುಕೊಳ್ಳುವಲ್ಲಿ ವಿಲವಾಗಿದೆ. ಉಪನಾಯಕ ್ಾ ಡು ಪ್ಲೆಸಿಸ್ ಗಾಯದ ಸಮಸ್ಯೆ ಹಾಗೂ ಯುವ ತಾರೆ ಜೇಕ್-್ರೆಸರ್ ಮೆಕ್‌ಗುರ್ಕ್ ರನ್‌ಬರ ಹಿನ್ನಡೆ ತಂದಿದೆ. ಕನ್ನಡಿಗ ಕೆಎಲ್ ರಾಹುಲ್, ಟ್ರಸ್ಟಾನ್ ಸ್ಟಬ್ಸ್ ಹಾಗೂ ಆಶುತೋಷ್ ಶರ್ಮರಿಂದ ಡೆಲ್ಲಿ ಮಧ್ಯಮ ಕ್ರಮಾಂಕ ಬಲಿಷ್ಠ ಎನಿಸಿದೆ.

ಕ್ಯಾಪಿಟಲ್ಸ್‌ಗೆ ಬೌಲಿಂಗ್ ಬಲ

ಡೆಲ್ಲಿ ಕ್ಯಾಪಿಟಲ್ಸ್ ಹಾಲಿ ಸೀಸನ್ ಯಶಸ್ಸಿನಲ್ಲಿ ಬೌಲಿಂಗ್ ವಿಭಾಗದ ನಿರ್ವಹಣೆಯೂ ಪ್ರಮುಖ ಕಾರಣ. ಯುವ ಸ್ಪಿನ್ನರ್ ವಿಪ್ರಜ್ ನಿಗಮ್ ಹಾಗೂ ಚೈನಾಮನ್ ಕುಲದೀಪ್ ಯಾದವ್ ಪ್ರಬಲ ಅಸ ಎನಿಸಿದ್ದಾರೆ. ಕುಲದೀಪ್ 5 ಪಂದ್ಯಗಳಲ್ಲಿ 10 ವಿಕೆಟ್ ಮತ್ತು ವಿಪ್ರಜ್ 7 ವಿಕೆಟ್ ಪಡೆದಿದ್ದಾರೆ.ಇವರಿಗೆ ವೇಗಿ ಮಿಚೆಲ್ ಸ್ಟಾರ್ಕ್ (9) ಸಾಥ್ ನೀಡಿದ್ದಾರೆ. ಮೂರನೇ ವೇಗಿ ಕೊರತೆ ತಂಡಕ್ಕಿದೆ. ನಾಯಕ ಅಕ್ಷರ್  6 ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಲವಾಗಿದ್ದಾರೆ. ಜತೆಗೆ 10ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

ಪುಟಿದೇಳುವ ಹಂಬಲ

ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆವೃತಿಯಲ್ಲಿ ಲಯಕ್ಕೆ ಬಂದಿಲ್ಲ. ಆರಂಭಿಕ ಸಂಜು ಸ್ಯಾಮ್ಸನ್ ಜತೆಗೆ ರಿಯಾನ್ ಪರಾಗ್, ನಿತೀಶ್ ರಾಣಾ ರನ್‌ಗಳಿಸಲು ಪರದಾಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಉತ್ತಮ ಆರಂಭದ ನಡುವೆಯೂ ರಾಜಸ್ಥಾನ ಬೃಹತ್ ಮೊತ್ತ ಗಳಿಸುತ್ತಿಲ್ಲ. ಟೂರ್ನಿಯ ಪ್ಲೇಆ್ ರೇಸ್‌ನಲ್ಲಿ ಉಳಿಯಲು ರಾಜಸ್ಥಾನ ಪುಟಿದೇಳಬೇಕಿದೆ. ಬೌಲಿಂಗ್‌ನಲ್ಲಿ ಜ್ರೋಾ ಆರ್ಚರ್ ಹೊರತುಪಡಿಸಿ ಇತರ ಬೌಲರ್‌ಗಳು ಲಯ ಕಂಡುಕೊಂಡಿಲ್ಲ. ಲಂಕಾ ಸ್ಪಿನ್ನರ್‌ಗಳಾದ ವಾನಿಂದು ಹಸರಂಗ, ಮಹೀಶ್ ತೀಕ್ಷಣ ಬಲ ತುಂಬಬೇಕಿದೆ. ಡೆಲ್ಲಿ ಬ್ಯಾಟರ್‌ಗಳ ಎದುರು ನೈಜ ಸವಾಲು ಎದುರಾಗುವ ನಿರೀಕ್ಷೆ ಇದೆ.

ಮುಖಾಮುಖಿ: 29

ಡೆಲ್ಲಿ: 14

ರಾಜಸ್ಥಾನ: 15

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net