ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರಕ್ಕೆ ಶರಣಾದ ಆರ್‌ಸಿಬಿ

Marcus Stoinis of Delhi Capitals.jpg and rishab pant for web
Published on

ದುಬೈ: ಸ್ಲಾಗ್ ಓವರ್‌ಗಳಲ್ಲಿ ನಿರಾಯಾಸವಾಗಿ ರನ್‌ಬಿಟ್ಟುಕೊಟ್ಟು, ಬ್ಯಾಟಿಂಗ್‌ನಲ್ಲೂ ಸಂಪೂರ್ಣ ವೈಫಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-13ರ ತನ್ನ 5ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 59 ರನ್‌ಗಳಿಂದ ಶರಣಾಯಿತು. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸರ್ವಾಂಗೀಣ ವೈಫಲ್ಯ ಅನುಭವಿಸಿತು. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ಅವಕಾಶ ತಪ್ಪಿಸಿಕೊಂಡಿತು. ಮತ್ತೊಂದೆಡೆ, ಸತತ 2ನೇ ಜಯ ದಾಖಲಿಸಿದ ಶ್ರೇಯಸ್ ಅಯ್ಯರ್ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ಮಾರ್ಕಸ್ ಸ್ಟೋಯಿನಿಸ್ (53*ಎಸೆತ, 26 ಎಸೆತ, 6 ಬೌಂಡರಿ, 2 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 196 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ, ನಾಯಕ ವಿರಾಟ್ ಕೊಹ್ಲಿ (43 ರನ್, 39 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಕನಿಷ್ಠ ಪ್ರತಿಹೋರಾಟ ತೋರಲು ವಿಫಲರಾದರು. ಇದರಿಂದ 9 ವಿಕೆಟ್‌ಗೆ 137 ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಶನಿವಾರ ದುಬೈನಲ್ಲಿ ಎದುರಿಸಲಿದೆ.

ಡೆಲ್ಲಿ ಕ್ಯಾಪಿಟಲ್ಸ್: 4 ವಿಕೆಟ್‌ಗೆ 196 (ಪೃಥ್ವಿ ಷಾ 42, ಸ್ಟೋಯಿನಿಸ್ 53*, ರಿಷಭ್ ಪಂತ್ 37, ಸಿರಾಜ್ 34ಕ್ಕೆ 2), ಆರ್‌ಸಿಬಿ: 9 ವಿಕೆಟ್‌ಗೆ 137 (ಕೊಹ್ಲಿ 43, ವಾಷಿಂಗ್ಟನ್ ಸುಂದರ್ 17, ರಬಾಡ 24ಕ್ಕೆ 4, ನೋರ್ಜೆ 22ಕ್ಕೆ 2, ಅಕ್ಷರ್ ಪಟೇಲ್ 18ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net