

ನ್ಯೂಯಾರ್ಕ್: ಹಾಲಿ ಚಾಂಪಿಯನ್ ಆಗಿ ಕಣ್ಕಕಿಳಿದ 24 ಗ್ರಾಂಡ್ ಸ್ಲಾಂ ವಿಜೇತ ಸೆರ್ಬಿಯಾದ ನೊವಾಕ್ ಜೋಕೊವಿಕ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಆಘಾತಕಾರಿ ಸೋಲುಂಡಿದ್ದಾರೆ. ಇದರೊಂದಿಗೆ ಅವರ ದಾಖಲೆಯ 25ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಆಸೆ ಈಡೇರಲಿಲ್ಲ. ಜತೆಗೆ 7 ವರ್ಷಗಳ ಬಳಿಕ ಒಂದೂ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿಲ್ಲದೆ ವರ್ಷ ಮುಗಿಸಿದರು. 2017ರಲ್ಲಿ ಕೊನೆಯದಾಗಿ ಜೋಕೋ ಆ ವರ್ಷದ ಒಂದೂ ಗ್ರಾಂಡ್ ಸ್ಲಾಂ ಗೆಲ್ಲಲು ವಿಲರಾಗಿದ್ದರು.
ಕಳೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಕೆರಿಯರ್ ಗೋಲ್ಡನ್ ಸ್ಲಾಂ ಸಾಧಿಸಿದ ಜೋಶ್‌ನಲ್ಲಿದ್ದ 37 ವರ್ಷದ ಜೋಕೊವಿಕ್, ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ 4-6,4-6, 6-2, 4-6 ರಿಂದ 28ನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್ ವಿರುದ್ಧ ಪರಾಭವಗೊಂಡರು. 2ನೇ ಶ್ರೇಯಾಂಕಿತ ಜೋಕೊವಿಕ್ ಅವರ 14 ಡಬಲ್ ಾಲ್ಟ್‌ಗಳ ಲಾಭವೆತ್ತಿದ ಅಲೆಕ್ಸಿ ಪಾಪಿರಿನ್ ವಿಂಬಲ್ಡನ್ ಸೋಲಿಗೆ ಮುಯ್ಯಿ ತೀರಿಸಿದರು. ಕಳೆದ ಬಾರಿಯ ಯುಎಸ್ ಓಪನ್, ಜೋಕೋ ಗೆದ್ದ ಕೊನೆಯ ಗ್ರಾಂಡ್ ಸ್ಲಾಂ ಎನಿಸಿದ್ದು, ಸ್ಪೇನ್‌ನ ಕಾಲೋಸ್ ಅಲ್ಕರಾಜ್ ನಿರ್ಗಮನ ಬಳಿಕ ಈ ಬಾರಿ ಮತ್ತೆ ಪ್ರಶಸ್ತಿ ೇವರಿಟ್ ಎನಿಸಿದ್ದರು.
2005 ಮತ್ತು 2006ರಲ್ಲಿ ಕೊನೆಯದಾಗಿ 3ನೇ ಸುತ್ತು ದಾಟಲು ವಿಲವಾಗಿದ್ದ ಜೋಕೊವಿಕ್, ಇದುವರೆಗೆ 10 ಬಾರಿ ಯುಎಸ್ ಓಪನ್‌ನಲ್ಲಿ ೈನಲ್‌ಗೇರಿದ್ದು, 4 ಬಾರಿ ಚಾಂಪಿಯನ್ ಎನಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದ ಮೂವರು ಆಟಗಾರರಾದ ಜೋಕೊವಿಕ್ (ಚಿನ್ನ), ಅಲ್ಕರಾಜ್ (ಬೆಳ್ಳಿ), ಲೊರೆಂಜೊ ಮುಸ್ಸೆಟ್ಟಿ (ಕಂಚು) 24 ಗಂಟೆಯ ಅಂತರದಲ್ಲಿ ಯುಎಸ್ ಓಪನ್‌ನಿಂದ ಹೊರಬಿದ್ದಿದ್ದಾರೆ.
ಬೋಪಣ್ಣಗೆ ಜಯ: ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಇಂಡೋನೇಷ್ಯಾದ ಅಲ್‌ದಿಲಾ ಸುಟ್‌ಜಿದಿ ಜೋಡಿ 7-6, 7-6 ರಿಂದ ನೆದರ್ಲೆಂಡ್‌ನ ಡೆಮಿ ಸ್ಕ್ರುಜ್- ಜರ್ಮನಿಯ ಟಿಮ್ ಪುಯೆಟ್ಜ ಎದುರು ಗೆದ್ದು 16ರ ಘಟ್ಟಕ್ಕೆ ಅರ್ಹತೆ ಪಡೆದರು.
ಜ್ವೆರೇವ್, ರುಬ್ಲೆವ್‌ಗೆ ಗೆಲುವು: ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್, ನಾರ್ವೆಯ ಕ್ಯಾಸ್ಪರ್ ರುಡ್, ಆಂಡ್ರೆ ರುಬ್ಲೆವ್ ಮತ್ತು ಗ್ರಿಗೋರ್ ಡಿಮಿಟ್ರೋವ್ 16ರ ಘಟ್ಟಕ್ಕೇರಿದರು. 4ನೇ ಶ್ರೇಯಾಂಕಿತ ಜ್ವೆರೇವ್ 5-7, 7-5, 6-1, 6-3 ರಿಂದ ಥಾಮಸ್ ಮಾರ್ಟಿನ್ ಎದುರು ಗೆದ್ದರೆ, ರಷ್ಯಾದ ಆಂಡ್ರೆ ರುಬ್ಲೆವ್ 6-3, 7-5, 6-4 ರಿಂದ ಜೆಕ್‌ಗಣರಾಜ್ಯದ ಜಿರಿ ಲೆಹೆಕಾ ವಿರುದ್ಧ, ಕ್ಯಾಸ್ಪರ್ ರುಡ್ 6-7, 3-6, 6-0, 6-3,6-1 ರಿಂದ ಚೀನಾದ ಜುನ್‌ಚೆಂಗ್ ಶಾಂಗ್ ಎದುರು ಗೆದ್ದು ಬೀಗಿದರು. ಅಮೆರಿಕ ಟೇಲರ್ ಫ್ರಿಟ್ಜ್ 6-3, 6-4, 6-2 ನೇರ ಸೆಟ್‌ಗಳಿಂದ ಅರ್ಜೆಂಟೀನಾದ ್ರಾನ್ಸಿಸೊ ಕೋಮೆಸನ ಅವರನ್ನು ಪರಾಭವಗೊಳಿಸಿ 16ರ ಘಟ್ಟಕ್ಕೇರಿದರು. ಪುರುಷರ ವಿಭಾಗದಲ್ಲಿ ಕಣಕ್ಕಿಳಿದ 6 ಮಾಜಿ ಚಾಂಪಿಯನ್ನರ ಪೈಕಿ ಡೇನಿಯಲ್ ಮೆಡ್ವೆಡೇವ್ ಮಾತ್ರ ಉಳಿದುಕೊಂಡಿದ್ದಾರೆ.
16ರ ಘಟ್ಟಕ್ಕೆ ಸಬಲೆಂಕಾ: ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಕೋ ಗ್ೌ, ವಿಶ್ವ ನಂ.2 ಅರಿನಾ ಸಬಲೆಂಕಾ, ಚೀನಾದ ಝೆಂಗ್ ಕ್ವಿನೆನ್ 4ನೇ ಸುತ್ತಿಗೇರಿದರು. ಕೋಕೋ ಗ್ೌ 3-6, 6-3, 6-3 ರಿಂದ 2 ಗಂಟೆ 3 ನಿಮಿಷಗಳ ಹೋರಾಟದಲ್ಲಿ ಯೂಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು ಮಣಿಸಿದರು. ಸಬಲೆಂಕಾ 2-6, 6-1, 6-2 ರಿಂದ ಎಕಥೆರಿನಾ ಅಲೆಕ್ಸಾಂಡ್ರೊವಾ ಎದುರು ಗೆಲುವು ದಾಖಸಿದರೆ, ಝೆಂಗ್ ಕ್ವಿನೆನ್6-2,6-1 ರಿಂದ ಜೂಲೆ ನೀಮಿರ್ ವಿರುದ್ಧ ಗೆದ್ದು ಮುಂದಿನ ಸುತ್ತಿಗೆ ಲಗ್ಗೆಯಿಟ್ಟರು.