ಸತತ 2ನೇ ಬಾರಿ ಫೈನಲ್‌ಗೆ ಅಲ್ಕರಾಜ್: ವಿಂಬಲ್ಡನ್‌ನಲ್ಲಿ ಅಜೇಯ ಓಟ

New-Project-13
Published on

ಲಂಡನ್: ಹಾಲಿ ಚಾಂಪಿಯನ್ ಸ್ಪೇನ್‌ನ ಕಾಲೋಸ್ ಅಲ್ಕರಾಜ್ ಸತತ 2ನೇ ಬಾರಿಗೆ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್‌ಗೇರಿದ್ದಾರೆ. ಇದರೊಂದಿಗೆ ಅಲ್ಕರಾಜ್ ವೃತ್ತಿಜೀವನದ 4ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಸನಿಹದಲ್ಲಿದ್ದು, ರಷ್ಯಾದ ಡೆನಿಲ್ ಮಡೆಡ್ವೇವ್ ಮೊದಲ ವಿಂಬಲ್ಡನ್ ಟ್ರೋಫಿ ಕನಸು ಭಗ್ನಗೊಂಡಿದೆ. ಅಲ್ಕರಾಜ್ ಭಾನುವಾರ ನೊವಾಕ್ ಜೋಕೊವಿಕ್ ಅಥವಾ ಲೊರೆಂಜೊ ಮುಸೆಟ್ಟಿ ಅವರನ್ನು ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದ್ದಾರೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತ ಅಲ್ಕರಾಜ್ 6-7 (7-1), 6-3, 6-4, 6-4 ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಇದರೊಂದಿಗೆ ಹಸಿರು ಅಂಕಣದಲ್ಲಿ ಗೆಲುವಿನ ಓಟವನ್ನು 13ನೇ ಪಂದ್ಯಕ್ಕೆ ವಿಸ್ತರಿಸಿದರು. ಮೊದಲ ಸೆಟ್‌ನಲ್ಲಿ ಟೈ ಬ್ರೇಕರ್‌ನಲ್ಲಿ ಹಿನ್ನಡೆ ಎದುರಿಸಿದ ಅಲ್ಕರಾಜ್ ಹಿನ್ನಡೆ ಕಂಡರು. ಬಳಿಕ ಮೂರು ಸೆಟ್‌ಗಳಲ್ಲಿ ಮೆಡ್ವೆಡೇವ್ ಎದುರು ಏಕಪಕ್ಷೀಯವಾಗಿ ಮೇಲುಗೈ ಸಾಧಿಸಿದ ಅಲ್ಕರಾಜ್ 2 ಗಂಟೆ 55 ನಿಮಿಷಗಳಲ್ಲಿ ಗೆದ್ದು ಬೀಗಿದರು. ಜತೆಗೆ ಕಳೆದ ವರ್ಷದ ಸೆಮೀಸ್‌ನ ಲಿತಾಂಶ ಪುನರಾರ್ತಿಸಿದರು.

2023ರ ವಿಂಬಲ್ಡನ್‌ನ 4ರ ಘಟ್ಟದಲ್ಲೂ ಈ ಇಬ್ಬರೂ ಮುಖಾಮುಖಿಯಾಗಿದ್ದರು. ಹಾಲಿ ವರ್ಷ ಫ್ರೆಂಚ್ ಓಪನ್ ಚಾಂಪಿಯನ್ ಎನಿಸಿರುವ 21 ವರ್ಷದ ಅಲ್ಕರಾಜ್ ಸತತ 2ನೇ ಟ್ರೋಫಿಯ ಹಂಬಲದಲ್ಲಿದ್ದಾರೆ. ಸತತ ಎರಡನೇ ಗ್ರಾಂಡ್ ಸ್ಲಾಂ ಫೈನಲ್‌ಗೇರುವ ಮೂಲಕ ಈ ಸಾಧನೆ ಮಾಡಿದ 2ನೇ ಕಿರಿಯ ಆಟಗಾರ ಎನಿಸಿದರು. ರಾೆಲ್ ನಡಾಲ್ (20 ವರ್ಷ, 34 ದಿನ) ಮೊದಲಿಗರು. ಅಲ್ಕರಾಜ್‌ಗೆ ಇದು 4 ಗ್ರಾಂಡ್ ಸ್ಲಾಂ ಫೈನಲ್ ಆಗಿದ್ದು, ಹಿಂದಿನ ಮೂರು ಬಾರಿಯೂ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net