ಯುವರಾಜ್ ಸಿಂಗ್-ದೀಪಿಕಾ ಪಡುಕೋಣೆ ಬ್ರೇಕ್-ಅಪ್ ಆಗಿದ್ದು ಯಾಕೆ ಗೊತ್ತೇ?

yuvi deepika
Published on

ನವದೆಹಲಿ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಜೀವನದಲ್ಲಿ ಹಲವಾರು ಹುಡುಗಿಯರು ಬಂದು ಹೋಗಿದ್ದಾರೆ. ಹಲವು ಮಹಿಳೆಯರ ಜತೆಗೆ ಅವರು ಡೇಟಿಂಗ್ ಮಾಡಿದರೂ, ಅವರು ಇನಿಂಗ್ಸ್ ಪೂರ್ತಿ ಯುವರಾಜ್‌ಗೆ ಸಾಥ್ ನೀಡದೆ ನಡುವೆಯೇ ‘ರನೌಟ್’ ಆಗಿ ನಿರ್ಗಮಿಸಿದ್ದಾರೆ. ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಕೂಡ ಅವರಲ್ಲೊಬ್ಬರು. ಹಾಗಾದರೆ ದೀಪಿಕಾ ಪಡುಕೋಣೆ ಜತೆ ಯುವರಾಜ್ ಬ್ರೇಕ್-ಅಪ್ ಮಾಡಿಕೊಂಡಿದ್ದು ಯಾಕೆ ಗೊತ್ತೇ?

2007ರಲ್ಲಿ ಭಾರತ ತಂಡದ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಯುವರಾಜ್ ಮತ್ತು ದೀಪಿಕಾ ಪಡುಕೋಣೆ ಕೆಲಕಾಲ ಪ್ರೀತಿಸುತ್ತಿದ್ದರು. ಆದರೆ ಅಲ್ಪ ಸಮಯದಲ್ಲಿಯೇ ಅವರ ಸಂಬಂಧ ಮುರಿದುಬಿದ್ದಿತ್ತು. ಸಂದರ್ಶನವೊಂದರಲ್ಲಿ ಈ ಬಗ್ಗೆ ಕಾರಣ ವಿವರಿಸಿರುವ ಯುವರಾಜ್ ಸಿಂಗ್, ‘ದಕ್ಷಿಣ ಆಫ್ರಿಕಾದಿಂದ ಮರಳಿದ ಬೆನ್ನಲ್ಲೇ ನಾನು ಓರ್ವ ಕಾಮನ್ ಫ್ರೆಂಡ್ ಮೂಲಕ ಮುಂಬೈನಲ್ಲಿ ದೀಪಿಕಾ ಅವರನ್ನು ಭೇಟಿಯಾಗಿದ್ದೆ. ನಾವಿಬ್ಬರೂ ಪರಸ್ಪರ ಇಷ್ಟಪಟ್ಟಿದ್ದೆವು. ಪರಸ್ಪರರ ಬಗ್ಗೆ ಇನ್ನಷ್ಟು ಹೆಚ್ಚು ತಿಳಿದುಕೊಳ್ಳಲು ಬಯಸಿದ್ದೆವು. ಆದರೆ ನಾವಿಬ್ಬರೂ ಹೆಚ್ಚಿನ ಸಮಯವನ್ನು ಜತೆಯಾಗಿ ಕಳೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಆಕೆ ಬೇರೆಯೇ ದಾರಿ ಹಿಡಿದರು’ ಎಂದು ವಿವರಿಸಿದ್ದಾರೆ.

ದೀಪಿಕಾ ಬಳಿಕ ನಟ ರಣಬೀರ್ ಕಪೂರ್‌ಗೆ ಹತ್ತಿರವಾದ ಬಗ್ಗೆ ಅವರ ಹೆಸರು ಹೇಳದೆಯೇ ವಿವರಣೆ ನೀಡಿರುವ ಯುವರಾಜ್ ಸಿಂಗ್, ‘ಆಕೆ ನನ್ನಿಂದ ದೂರವಾಗುವುದು ಮತ್ತು ಬೇರೊಬ್ಬ ವ್ಯಕ್ತಿಯ ಜತೆಗೆ ಹೋಗುವುದು ಆಕೆಯ ವೈಯಕ್ತಿಕ ಆಯ್ಕೆಯಾಗಿತ್ತು. ಸಂಬಂಧವೊಂದರಲ್ಲಿ ಓರ್ವ ವ್ಯಕ್ತಿ ಬೇರೆಯೇ ದಿಕ್ಕಿನಲ್ಲಿ ಸಾಗಲು ಬಯಸಿದರೆ, ಮತ್ತೋರ್ವ ವ್ಯಕ್ತಿ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ನಾನು ಯಾರನ್ನೂ ದೂರುವುದಿಲ್ಲ’ ಎಂದು ಹೇಳಿದ್ದಾರೆ.

ಕನ್ನಡತಿ ದೀಪಿಕಾ ಪಡುಕೋಣೆ ಅವರು ಯುವರಾಜ್ ಸಿಂಗ್‌ಗೆ ಹತ್ತಿರವಾಗುವುದಕ್ಕೆ ಮುನ್ನ ಮತ್ತೋರ್ವ ಕ್ರಿಕೆಟಿಗ ಎಂಎಸ್ ಧೋನಿ ಜತೆ ಡೇಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. ದೀಪಿಕಾ ಹೇಳಿದ ಕಾರಣದಿಂದಲೇ ಧೋನಿ ತಮ್ಮ ಉದ್ದನೆಯ ಕೂದನ್ನು ಕತ್ತರಿಸಿಕೊಂಡಿದ್ದರು ಎಂದೂ ಹೇಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net