PHOTOS| ಕರೊನಾ ಹಾವಳಿ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ​ ದೀಪಿಕಾ ಕುಮಾರಿ-ಅತನು ದಾಸ್​

ddp
Published on

ರಾಂಚಿ: ದೇಶದಲ್ಲಿ ಕರೊನಾ ವೈರಸ್​ ಹಾವಳಿ ಮುಂದುವರಿದಿರುವ ನಡುವೆ ಭಾರತದ ಒಲಿಂಪಿಯನ್​ ಕ್ರೀಡಾತಾರೆಯರಾದ ದೀಪಿಕಾ ಕುಮಾರಿ ಮತ್ತು ಅತನು ದಾಸ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಈ ಬಿಲ್ಗಾರರು ವಿವಾಹವಾದರು.

ಕರೊನಾ ಭೀತಿಯ ನಡುವೆ ಸರ್ಕಾರದ ಮಾರ್ಗಸೂಚಿಯಂತೆ ವಿವಾಹ ಸಮಾರಂಭ ನಡೆಯಿತು. ಒಟ್ಟು 50 ಮಂದಿಯಷ್ಟೇ ವಿವಾಹಕ್ಕೆ ಸಾಕ್ಷಿಯಾಗಿದ್ದರು ಮತ್ತು ಎಲ್ಲರೂ ಮಾಸ್ಕ್​ ಧರಿಸಿದ್ದರು. ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೇನ್​ ನವವಿವಾಹಿತರಿಗೆ ಶುಭಹಾರೈಸಿದರು. ಟೀಮ್​ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಕೂಡ ವಿವಾಹಕ್ಕೆ ಹಾಜರಾಗಿ ಶುಭಹಾರೈಸಿದರು ಎನ್ನಲಾಗಿದೆ.

ಆರ್ಚರಿ ಪಟುಗಳಾದ 28 ವರ್ಷದ ಅತನು ಮತ್ತು 26 ವರ್ಷದ ದೀಪಿಕಾ 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಳೆದ ವರ್ಷವೇ ಇವರಿಬ್ಬರ ವಿವಾಹ ನಡೆಯಬೇಕಾಗಿದ್ದರೂ ಒಲಿಂಪಿಕ್ಸ್ ಸಿದ್ಧತೆಯಿಂದಾಗಿ ಮುಂದೂಡಲ್ಪಟ್ಟಿತ್ತು. ಬಳಿಕ ಈ ವರ್ಷ ಒಲಿಂಪಿಕ್ಸ್ ಬಳಿಕ ವಿವಾಹ ನಿಗದಿಯಾಗಿತ್ತು. ಈಗ ಒಲಿಂಪಿಕ್ಸ್​ ಮುಂದೂಡಿಕೆಯ ನಡುವೆ ವಿವಾಹ ನೆರವೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net