

ಹ್ಯಾಮಿಲ್ಟನ್: ಸತತ ಎರಡು ಪಂದ್ಯಗಳ ಗೆಲುವಿನ ಜೋಶ್ನಲ್ಲಿರುವ ಶುಭಮಾನ್ ಗಿಲ್ ಪಡೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯರಿಗೆ ಸರಣಿ ಗೆಲುವಿನ ಉಡುಗೊರೆ ನೀಡುವ ನಿರೀಕ್ಷೆ ಹರಡಿದೆ. ಭಾರತ ಹಾಗೂ ಅತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯಲ್ಲಿರುವ ಭಾರತ ಹ್ಯಾಟ್ರಿಕ್ ಜಯದ ತವಕದಲ್ಲಿದ್ದು, ಪಂದ್ಯಕ್ಕೆ ಮಳೆ ಭೀತಿಯೂ ಕಾಡುತ್ತಿದೆ.
ಸತತ ಸೋಲು ಹಾಗೂ ಆಟಗಾರರ ಗಾಯದ ಸಮಸ್ಯೆಯಿಂದ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿರುವ ನ್ಯೂಜಿಲೆಂಡ್ ತಂಡ ತವರಿನಲ್ಲಿ ಸತತ 12 ಸರಣಿ ಗೆಲುವಿನ ಅಜೇಯ ಓಟ ಕಾಯ್ದುಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 2019ರಲ್ಲಿ ಭಾರತದ ಎದುರೇ ಕಿವೀಸ್ ಕೊನೆಯದಾಗಿ ಏಕದಿನ ಸರಣಿ ಸೋತಿತ್ತು. ವೇಗದ ಬೌಲರ್ಗಳಿಗೆ ನೆರವಾಗುವ ಪಿಚ್, ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳಿಗೆ ಸವಾಲೊಡ್ಡುವ ಸಾಧ್ಯತೆಯಿದೆ. ಮಾಜಿ ನಾಯಕ ರೋಹಿತ್ ಶರ್ಮ (0, 23 ರನ್) ಜತೆಗೆ ನಾಯಕ ಶುಭಮಾನ್ ಗಿಲ್ ಆತಿಥೇಯ ಬೌಲರ್ಗಳ ಎದುರು ಪರದಾಡಿದ್ದರು.
ಟೆಸ್ಟ್ ಸರಣಿ ಸಿದ್ಧತೆಗೆ ತೆರಳುವ ಮುನ್ನ ಸರಣಿ ಗೆಲುವು ಖಾತ್ರಿಪಡಿಸಿಕೊಳ್ಳುವ ಗುರಿ ಶುಭಮಾನ್ ಮುಂದಿದೆ. ಕೊನೇ ಎರಡು ಪಂದ್ಯಗಳಲ್ಲಿ ಉಪನಾಯಕ ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ಆದರೆ, ಕೆಎಲ್ ರಾಹುಲ್ಗಿಂತ ಮೊದಲು ಅಕ್ಷರ್ ಪಟೇಲ್ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿರುವುದು ಚರ್ಚೆ ಹುಟ್ಟು ಹಾಕಿದೆ. ಚೆಂಡು ಅನಿರೀಕ್ಷಿತವಾಗಿ ಹೆಚ್ಚು ಪುಟಿಯುವ ಪರಿಸ್ಥಿತಿಗೆ ಅಕ್ಷರ್ ಆಟದ ಶೈಲಿ ಹೊಂದುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿವೆ. ಬೌಲರ್ಗಳಿಗೆ ಸ್ವರ್ಗ ಎನಿಸಿರುವ ಹ್ಯಾಮಿಲ್ಟನ್ ಅಂಗಣದಲ್ಲಿ ಗುರ್ನೂರ್ ಬ್ರಾರ್, ಅಂಶುಲ್ ಕಂಬೋಜ್ ಹಾಗೂ ಅರ್ಷದೀಪ್ ಸಿಂಗ್ ಮತ್ತೊಮ್ಮೆ ಪರಿಣಾಮಕಾರಿ ಎನಿಸಲಿದ್ದಾರೆ.
ಟೀಮ್ ನ್ಯೂಸ್:
ಭಾರತ: ಗೆಲುವಿನ ಕಾಂಬಿನೇಷನ್ನಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಜತೆಗೆ ನ.19ರಂದು ಆರಂಭವಾಗಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಮುನ್ನ ಶುಭಮಾನ್ ಗಿಲ್, ಕೆಎಲ್ ರಾಹುಲ್, ಅಂಶುಲ್ ಕಂಬೋಜ್ ಪಾಲಿಗೆ ಸರಣಿಯಲ್ಲಿ ಕೊನೇ ಪಂದ್ಯ ಇದಾಗಿರಲಿದೆ. ರೆಡ್ಬಾಲ್ ಸರಣಿ ಪೂರ್ವ ಸಿದ್ಧತೆಗೆ ಕೊನೇ 2 ಏಕದಿನಕ್ಕೆ ಅಲಭ್ಯರಾಗಲಿದ್ದಾರೆ. ಯುವ ವೇಗಿಗಳ ಅಮೋಘ ನಿರ್ವಹಣೆಯ ನಡುವೆ ಅನುಭವಿ ವೇಗಿ ಮೊಹಮದ್ ಸಿರಾಜ್ಗೆ ಚಾನ್ಸ್ ಅನುಮಾನ.
ನ್ಯೂಜಿಲೆಂಡ್: ಹಿಂದಿನ ಪಂದ್ಯದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದ ವೇಗಿ ಬ್ಲೇರ್ ಟಿಕ್ನರ್ ಕಡ್ಡಾಯ ಏಳು ದಿನಗಳ ಸ್ಟಾೃಂಡ್ ಡೌನ್ ಅವಧಿ ಪೂರ್ಣಗೊಳಿಸಬೇಕಿದ್ದು, ಸರಣಿಗೆ ಅನುಮಾನ ಎನಿಸಿದ್ದಾರೆ. ಅವರ ಬದಲಿಗೆ ಕ್ರಿಸ್ಟಿಯನ್ ಕ್ಲಾರ್ಕ್ ಸೇರ್ಪಡೆಯಾಗಿದ್ದಾರೆ. ಮ್ಯಾಟ್ ಹೆನ್ರಿ 4ನೇ ಪಂದ್ಯಕ್ಕೆ ಮುನ್ನ ಕಣಕ್ಕಿಳಿಯುವುದಿಲ್ಲ. ರನ್ಬರದ ನಡುವೆಯೂ ವಿಲ್ ಯಂಗ್ ಮತ್ತೊಂದು ಅವಕಾಶ ಪಡೆಯಬಹುದು.
ಆರಂಭ: ಬೆಳಗ್ಗೆ 7.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
ಮಳೆ ಅಡಚಣೆ ಭೀತಿ
ಮೊದಲೆರಡು ಏಕದಿನ ಪಂದ್ಯಗಳ ಬಳಿಕ ಮೂರನೇ ಮುಖಾಮುಖಿಗೂ ಮಳೆ ಅಡಚಣೆ ತರುವ ಭೀತಿ ಇದೆ. ಮಂಗಳವಾರ ಹ್ಯಾಮಿಲ್ಟನ್ನಲ್ಲಿ ರೆಡ್ ಅಲರ್ಟ್ ೋಷಿಸಲಾಗಿದ್ದು, ಪಂದ್ಯ ನಡೆಯುವುದು ಅನುಮಾನ ಎನಿಸಿದೆ. ಭಾರಿ ಗಾಳಿ ಜತೆಗೆ ಗುಡುಗು ಸಹಿತ ಶೇ.24 ಮಳೆ ಬೀಳುವ ಸಾಧ್ಯತೆ ಇದೆ. ಸೋಮವಾರ ಹೊರಾಂಗಣ ಅಭ್ಯಾಸಕ್ಕೂ ಭಾರಿ ಮಳೆ ಅಡ್ಡಿಪಡಿಸಿದ್ದು, ಟೀಮ್ ಇಂಡಿಯಾ ಆಟಗಾರರು ಒಳಾಂಗಣದ ನೆಟ್ಸ್ನಲ್ಲಿ ನಡೆಸಿದರು.
ಪಿಚ್ ರಿಪೋರ್ಟ್
ಸೆಡ್ಡನ್ ಪಾರ್ಕ್ನಲ್ಲೂ ಬೌಲರ್ಗಳ ಪ್ರಾಬಲ್ಯ ನಿರೀಕ್ಷಿಸಲಾಗಿದೆ. ಹವಾಮಾನ ವೈರೀತ್ಯದಿಂದಾಗಿ ಹ್ಯಾಮಿಲ್ಟನ್ನಲ್ಲಿ ಪಿಚ್ ಸಿದ್ಧತೆಗೂ ತೊಂದರೆ ಉಂಟಾಗಿದೆ. ಮಳೆ, ಮೋಡ ಕವಿದ ವಾತಾವರಣದಿಂದಾಗಿ ವೇಗದ ಬೌಲರ್ಗಳಿಗೆ ಪಿಚ್ ಹೆಚ್ಚು ನೆರವಾಗುವ ಸಾಧ್ಯತೆ ಇದೆ. ಕಳೆದ ವರ್ಷ ಇಲ್ಲಿ ನಡೆದಿದ್ದ ಎರಡು ಏಕದಿನದಲ್ಲಿ ಇಂಗ್ಲೆಂಡ್, ವಿಂಡೀಸ್ ತಂಡಗಳು ಕ್ರಮವಾಗಿ 175, 161 ರನ್ಗಳಿಗೆ ಆಲೌಟ್ ಆಗಿದ್ದವು.