ಇಂದು ಕ್ಯಾಪಿಟಲ್ಸ್‌ಗೆ ಕೆಕೆಆರ್ ಚಾಲೆಂಜ್: ಗೆಲುವಿನ ಹಳಿಗೆ ಮರಳಲು ಕಾದಾಟ

New Project (1)
Published on

ನವದೆಹಲಿ: ಆರಂಭಿಕ ಪಂದ್ಯಗಳ ಬಳಿಕ ಅಸ್ಥಿರ ನಿರ್ವಹಣೆ ತೋರಿರುವ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಮಂಗಳವಾರ ಹಾಲಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ಎದುರು ಸೆಣಸಾಡಲಿದೆ. ಅಕ್ಷರ್ ಪಟೇಲ್ ಪಡೆ ಪ್ಲೇಆ್ ಅವಕಾಶ ವೃದ್ಧಿಸಿಕೊಳ್ಳುವುದರ ಜತೆಗೆ ಅಂಕಪಟ್ಟಿಯಲ್ಲಿ ಸುಧಾರಣೆ ಕಾಣುವ ಹಂಬಲದಲ್ಲಿದ್ದು, ಅಜಿಂಕ್ಯ ರಹಾನೆ ಪಡೆ ಮಾಡು ಇಲ್ಲವೆ ಮಡಿ ಒತ್ತಡದಲ್ಲಿ ಕಣಕ್ಕಿಳಿಯಲಿದೆ.

ಮಧ್ಯಮ ಕ್ರಮಾಂಕ ವೈಲ್ಯದಿಂದ ಹಿಂದಿನ 4ರಲ್ಲಿ 2 ಪಂದ್ಯ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾದಿ ಸುಗಮವಾಗಿರಲು ಗೆಲುವು ಅನಿವಾರ‌್ಯ. ಟೂರ್ನಿಯ ಕೊನೇ ಹಂತದಲ್ಲಿ ಎಚ್ಚರ ತಪ್ಪಿದರೆ ಪ್ಲೇಆ್ ರೇಸ್‌ನಿಂದ ಹೊರಬೀಳುವ ಭೀತಿಯೂ ಇದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು, 3 ಸೋಲಿನೊಂದಿಗೆ 12 ಅಂಕಗಳಿಸಿ ಸದ್ಯ ಅಂಕಪಟ್ಟಿಯ 4ನೇ ಸ್ಥಾನದಲ್ಲಿದೆ. ಪಂಜಾಬ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡ ನಂತರ ಕೆಕೆಆರ್ 9 ಪಂದ್ಯಗಳಲ್ಲಿ 3 ಜಯ, 5 ಸೋಲಿನೊಂದಿಗೆ 7 ಅಂಕ ಕಲೆಹಾಕಿ, 7ನೇ ಸ್ಥಾನದಲ್ಲಿದೆ. ಡೆಲ್ಲಿ ತಂಡ ತವರಿನ ಅಂಗಣ ಫಿರೋಜ್ ಷಾ ಕೋಟ್ಲಾದಲ್ಲಿ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋಲುಂಡಿರುವುದು ಹಿನ್ನಡೆ ಎನಿಸಿದೆ. ಆರ್‌ಸಿಬಿ ವಿರುದ್ಧ ವಿಕೆಟ್ ಪಡೆಯದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳಬೇಕಿದೆ. ಅಕ್ಷರ್ ಪಟೇಲ್ ಲಯ ಕಂಡುಕೊಂಡಿರುವುದು ಕೋಟ್ಲಾದ ನಿಧಾನಗತಿಯ ಪಿಚ್‌ನಲ್ಲಿ ಡೆಲ್ಲಿಗೆ ಪ್ಲಸ್ ಪಾಯಿಂಟ್ ಎನಿಸಿದೆ. ಕೆಕೆಆರ್ ಸಹ ಬೌಲರ್‌ಗಳ ವೈಲ್ಯದಿಂದಾಗಿ ಲೀಗ್ ಹಂತದಲ್ಲಿ ಅಭಿಯಾನ ಕೊನೆಗೊಳಿಸುವ ಒತ್ತಡದಲ್ಲಿ ಸಿಲುಕಿದ್ದು, ಸುನೀಲ್ ನಾರಾಯಣ್, ವರುಣ್ ಚಕ್ರವರ್ತಿ ಪರಿಣಾಮಕಾರಿ ಎನಿಸಬೇಕಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಲು ಕೆಕೆಆರ್ ಸಂಘಟಿತ ನಿರ್ವಹಣೆ ಅಗತ್ಯವೆನಿಸಿದೆ.

ಮಧ್ಯಮ ಕ್ರಮಾಂಕ ವೈಲ್ಯ

ಹಾಲಿ ಆವೃತ್ತಿಯಲ್ಲಿ ಐದು ವಿಭಿನ್ನ ಆರಂಭಿಕ ಜೋಡಿ ಕಣಕ್ಕಿಳಿಸಿರುವ ಡೆಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಿತ ನಿರ್ವಹಣೆ ಬೇಕಿದೆ. ಅಭಿಷೇಕ್ ಪೊರೆಲ್ ಆಕ್ರಮಣಕಾರಿ ಆಟದ ಮೂಲಕ ಆರಂಭಿಕ ಸ್ಥಾನ ಸಮರ್ಥಿಸಿಕೊಂಡಿದ್ದಾರೆ. ಪುನರಾಗಮನ ಕಂಡಿರುವ ಉಪನಾಯಕ ಡು ಪ್ಲೆಸಿಸ್ ಬೇಗನೆ ಾರ್ಮ್‌ಗೆ ಮರಳಬೇಕಿದೆ. ಮುಂಬೈ ವಿರುದ್ಧದ ಅಬ್ಬರದ ಬಳಿಕ ಕರುಣ್ ನಾಯರ್ ಅವರಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಇದು ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಜವಾಬ್ದಾರಿ ಹೆಚ್ಚಿಸಿದೆ. ಅಕ್ಷರ್ ಪಟೇಲ್, ಟ್ರಿಸ್ಟಾನ್ ಸ್ಟಬ್ಸ್ ಅವರಿಂದ ಹೆಚ್ಚಿನ ರನ್ ಕೊಡುಗೆ ಬೇಕಿದೆ.

ಕೆಕೆಆರ್ ಹಾದಿ ಕಠಿಣ

ಪ್ಲೇಆ್ ಆಸೆ ಜೀವಂತವಿರಿಸಲು ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಕೆಕೆಆರ್, ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವುದು ಕಠಿಣವೆನಿಸಿದೆ. ಸುನೀಲ್ ನಾರಾಯಣ್ ಜತೆಗೆ ಕ್ವಿಂಟನ್ ಡಿ ಕಾಕ್ ಮತ್ತು ರಹಮಾನಲ್ಲಾ ಗುರ್ಬಜ್ ಅವರನ್ನು ಆರಂಭಿಕ ಸ್ಥಾನದಲ್ಲಿ ಬದಲಾಯಿಸಿದರೂ, ಅಜಿಂಕ್ಯ ರಹಾನೆ, ಅಂಗಕ್ರಿಶ್ ರಘುವಂಶಿ ಮೇಲೆ ಬ್ಯಾಟಿಂಗ್ ವಿಭಾಗ ಸಂಪೂರ್ಣ ಅವಲಂಬಿತವಾಗಿದೆ. ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್ ಮತ್ತು ರಮಣದೀಪ್ ಸಿಂಗ್ ಒಳಗೊಂಡ ಮಧ್ಯಮ ಕ್ರಮಾಂಕ ಗಮನಾರ್ಹ ಪರಿಣಾಮ ಬೀರಲು ಪರದಾಡುತ್ತಿದೆ. ಬೌಲಿಂಗ್ ವಿಭಾಗವೂ ಕಳವಳಕಾರಿ ಎನಿಸಿದೆ.

ಮುುಖಾಮುಖಿ: 34

ಡೆಲ್ಲಿ: 15

ಕೆಕೆಆರ್: 18

ರದ್ದು:1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net