ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿಯರು ಈಗ ಟೆನಿಸ್ ಆಟಗಾರ್ತಿಯರು!

warner web
Published on

ಮೆಲ್ಬೋರ್ನ್: ಕ್ರೀಡಾಪಟುಗಳ ಮಕ್ಕಳು ಕ್ರೀಡಾಪಟುಗಳಾಗುವುದು ಹೊಸದೇನೂ ಅಲ್ಲ ಬಿಡಿ. ಅದೇ ರೀತಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರ ಪುತ್ರಿಯರೂ ಕ್ರೀಡಾಪಟುಗಳಾಗುತ್ತಿದ್ದಾರೆ. ಆದರೆ ಅವರು ಆಸಕ್ತಿ ತೋರಿರುವುದು ಕ್ರಿಕೆಟ್ ಆಟಕ್ಕಲ್ಲ. ಬದಲಾಗಿ ಟೆನಿಸ್ ಆಟದತ್ತ ಆಸಕ್ತಿ ಬೆಳೆಸಿದ್ದಾರೆ. ಸ್ಥಳೀಯ ಮಕ್ಕಳ ಟೆನಿಸ್ ಟೂರ್ನಿಯಲ್ಲಿ ಅವರು ಪದಾರ್ಪಣೆಯನ್ನೂ ಮಾಡಿದ್ದಾರೆ.

ಮಕ್ಕಳಾದ ಇವಿ ಮಯಿ ಮತ್ತು ಇಂಡಿ ರಯಿ ಟೆನಿಸ್ ಸಮವಸ ಧರಿಸಿ ರ‌್ಯಾಕೆಟ್ ಹಿಡಿದಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಭಾನುವಾರ ಪ್ರಕಟಿಸಿರುವ ಡೇವಿಡ್ ವಾರ್ನರ್, ‘ಇಬ್ಬರು ಅತ್ಯಂತ ಖುಷಿಯ ಹುಡುಗಿಯರು. ಇಂದು ಅವರ ಚೊಚ್ಚಲ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡರು. ಇಬ್ಬರೂ ಅಮೋಘವಾಗಿ ಆಟವಾಡಿದರು. ಇಬ್ಬರ ಬಗ್ಗೆಯೂ ನನಗೆ ಹೆಮ್ಮೆ ಇದೆ. ಅಮ್ಮ ಕ್ಯಾಂಡಿಸ್ ವಾರ್ನರ್ ಉತ್ತಮವಾಗಿ ಟೆನಿಸ್ ಆಟ ಕಲಿಸಿಕೊಟ್ಟಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡದ ಆಟಗಾರರಾಗಿರುವ ವಾರ್ನರ್ ಒಟ್ಟು ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ವಾರ್ನರ್ ಪುತ್ರಿಯರಾದ ಇವಿ ಮತ್ತು ಇಂಡಿ ಕ್ರಿಕೆಟ್ ಆಟದ ಬಗ್ಗೆಯೂ ವಿಶೇಷ ಆಸಕ್ತಿ ಹೊಂದಿದ್ದು, ಈ ಹಿಂದೆ ಅವರಿಬ್ಬರು ಬ್ಯಾಟಿಂಗ್ ಮಾಡುವ ವಿಡಿಯೋಗಳನ್ನೂ ಪ್ರಕಟಿಸಿದ್ದರು. ಇಂಡಿಗೆ ವಿರಾಟ್ ಕೊಹ್ಲಿ ನೆಚ್ಚಿನ ಕ್ರಿಕೆಟಿಗರಾಗಿದ್ದು, ಕಳೆದ ಆಸೀಸ್ ಪ್ರವಾಸದ ವೇಳೆ ಕೊಹ್ಲಿ ತಮ್ಮ ಜೆರ್ಸಿಯನ್ನು ಆಕೆಗೆ ಉಡುಗೊರೆಯಾಗಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net