ಐಪಿಎಲ್ ಆರಂಭಿಕ ಪಂದ್ಯಗಳಿಗೆ ವಾರ್ನರ್ ಅಲಭ್ಯಕ್ಕೆ ಕಾರಣವೇನು?

warner for web
Published on

ಮೆಲ್ಬೋರ್ನ್: ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಸ್ಫೋಟಕ ಬ್ಯಾಟರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡೇವಿಡ್ ವಾರ್ನರ್, 15ನೇ ಐಪಿಎಲ್‌ನ ಆರಂಭಿಕ 5-6 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮಾರ್ಚ್ 30 ರಂದು ವಾರ್ನ್ ಅವರ ಅಂತ್ಯಕ್ರಿಯೆಯೂ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ವಾರ್ನರ್ ಸದ್ಯ ಪಾಕಿಸ್ತಾನ ಪ್ರವಾಸದಲ್ಲಿದ್ದು, ವಾರ್ನ್ ಅಂತ್ಯಕ್ರಿಯೆಯಲ್ಲಿ ಶೇಕಡ 100 ಪಾಲ್ಗೊಳ್ಳಲಿದ್ದೇನೆ ಎಂದು ಖಚಿತಪಡಿಸಿದ್ದಾರೆ. ‘ನಾನು ಚಿಕ್ಕವನಿದ್ದಾಗ ವಾರ್ನ್ ಅವರ ಪೋಸ್ಟರ್ ಅನ್ನು ಗೋಡೆಗೆ ಹಾಕಿಕೊಂಡಿದ್ದೆ, ಅವರಂತೆಯೇ ಆಗಬೇಕು’ ಎಂಬುದು ನನ್ನ ಕನಸಾಗಿತ್ತು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಲಾಹೋರ್‌ನಲ್ಲಿ ಮಾರ್ಚ್ 25ಕ್ಕೆ ಮುಕ್ತಾಯಗೊಳ್ಳಲಿದೆ. ಪೂರ್ವನಿಗದಿಯಂತೆ ವಾರ್ನರ್ ಪಾಕ್ ಪ್ರವಾಸದ ಬಳಿಕ ನೇರವಾಗಿ ಐಪಿಎಲ್‌ನಲ್ಲಿ ಆಡಲು ಭಾರತಕ್ಕೆ ಆಗಮಿಸಬೇಕಿತ್ತು. ಮಾರ್ಚ್ 30ಕ್ಕೆ ವಾರ್ನ್ ಅಂತ್ಯಕ್ರಿಯೆ ಮುಕ್ತಾಯಗೊಂಡರೂ ವಾರ್ನರ್, ಏಪ್ರಿಲ್ 6ರಂದು ಭಾರತಕ್ಕೆ ಆಗಮಿಸುವ ಸಾಧ್ಯತೆಗಳಿದ್ದು, 5 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಆ ಬಳಿಕವಷ್ಟೇ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net