

ದುಬೈ: ಕಳೆದ ಐಪಿಎಲ್ನಲ್ಲಿ ರನ್ಬರ ಎದುರಿಸಿದಾಗ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಕಳೆದುಕೊಳ್ಳುವ ಜತೆಗೆ ಟೂರ್ನಿಯ 2ನೇ ಭಾಗದಲ್ಲಿ ಆಡುವ 11ರ ಬಳಗದಿಂದಲೂ ಹೊರಬಿದ್ದಿದ್ದ ಆರಂಭಿಕ ಡೇವಿಡ್ ವಾರ್ನರ್, ಇದೀಗ ಟಿ20 ವಿಶ್ವಕಪ್ನಲ್ಲಿ ಆಸೀಸ್ ಗೆಲುವಿಗೆ ನೆರವಾಗುವ ಜತೆಗೆ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೀಗ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್, ಸನ್ರೈಸರ್ಸ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
7 ಪಂದ್ಯಗಳಲ್ಲಿ 289 ರನ್ ಸಿಡಿಸಿದ ವಾರ್ನರ್ಗೆ ಸರಣಿಶ್ರೇಷ್ಠ ಪ್ರಶಸ್ತಿ ಘೋಷಣೆಯಾದ ಚಿತ್ರದೊಂದಿಗೆ ಕ್ಯಾಂಡಿಸ್, ‘ಔಟ್ ಆಫ್ ಫಾರ್ಮ್, ತುಂಬ ವಯಸ್ಸಾಯಿತು, ಮಂದವಾಗಿದ್ದಾರೆ! (ನಗುವಿನ ಇಮೋಜಿ), ಅಭಿನಂದನೆಗಳು ಡೇವಿಡ್ ವಾರ್ನರ್’ ಎಂದು ಟ್ವೀಟಿಸಿದ್ದಾರೆ.
ಈ ಮೂಲಕ ಫಾರ್ಮ್ನಲ್ಲಿಲ್ಲವೆಂದು ವಾರ್ನರ್ರನ್ನು ಕಡೆಗಣಿಸಿದ್ದಕ್ಕೆ ಸನ್ರೈಸರ್ಸ್ ಮತ್ತು ವಾರ್ನರ್ ಟೀಕಾಕಾರರಿಗೆ ಚಾಟಿ ಬೀಸಿದ್ದಾರೆ. 2016ರಲ್ಲಿ ವಾರ್ನರ್ ಸಾರಥ್ಯದಲ್ಲೇ ಸನ್ರೈಸರ್ಸ್ ತಂಡ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಆದರೂ ಈ ಬಾರಿ 2ನೇ ಚರಣದಲ್ಲಿ 2 ಪಂದ್ಯಗಳ ಬಳಿಕ ಅವರಿಗೆ ತಂಡದ ಡಗೌಟ್ಗೂ ಪ್ರವೇಶ ನೀಡಿರಲಿಲ್ಲ. ಬಳಿಕ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದರು.