

ಬೆಂಗಳೂರು: ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಕಳೆದ ಹಲವು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಲಾಕ್‌ಡೌನ್ ವೇಳೆ ಬಗೆ ಬಗೆ ವಿಡಿಯೋ ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಅದರಲೂ ಭಾರತೀಯ ಚಲನಚಿತ್ರ ಹಾಡುಗಳಿಗೆ ಮಾಡಿರುವ ವಿಡಿಯೋಗಳು ಭಾರಿ ಸದ್ದು ಮಾಡಿವೆ. ಇದೀಗ ಹನಿಸಿಂಗ್ ಹಾಡಿರುವ ಹಾಡಿಗೆ ಗಾಳಿಯಲ್ಲಿ ತೇಲುವ ಮೂಲಕ ಅಶ್ಚರ್ಯ ಮೂಡಿಸಿದ್ದಾರೆ. ಜತೆಗೆ ಅಭಿಮಾನಿಗಳಿಗೆ ನೀವು ಪ್ರಯತ್ನಿಸಿ ಎಂದು ಹೇಳಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದಿರುವ ವಾರ್ನರ್, ಇದೀಗ ಇನ್‌ಸ್ಟಾಗ್ರಾಂ ಮೂಲಕವೂ ಸಾಕಷ್ಟು ಅಭಿಮಾನಿಗಳನ್ನು ಗೆದ್ದಿದ್ದಾರೆ. ಸುಮಾರು 4.3 ಮಿಲಿಯನ್ ಮಂದಿ ವಾರ್ನರ್‌ರನ್ನು ಾಲೋ ಮಾಡುತ್ತಿದ್ದಾರೆ. ವಾರ್ನರ್‌ಗೆ ಅವರ ಪತ್ನಿ ಕ್ಯಾಂಡೈಸ್ ಹಾಗೂ ಮಕ್ಕಳು ಕೂಡ ಹೆಜ್ಜೆ ಹಾಕಿದುಂಟು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿರುವ ವಾರ್ನರ್, ಹಲವು ತೆಲುಗು ಚಿತ್ರದ ಹಾಡುಗಳಿಗೆ ಹಾಗೂ ಡೈಲಾಗ್‌ಗಳಿಗೂ ವಿಡಿಯೋ ಮಾಡಿ ಗಮನಸೆಳೆದಿದ್ದಾರೆ.
ಇದನ್ನೂ ಓದಿ: ಭಾರತೀಯ ಟೆನಿಸ್ ದಿಗ್ಗಜನಿಗೆ 47ರ ಸಂಭ್ರಮ..
ಆಸ್ಟ್ರೇಲಿಯಾ ಪರ 84 ಟೆಸ್ಟ್ ಪಂದ್ಯಗಳನ್ನಾಡಿರುವ ವಾರ್ನರ್, 24 ಶತಕ ಸೇರಿದಂತೆ 7244 ರನ್ ಬಾರಿಸಿದ್ದರು, 123 ಏಕದಿನ ಪಂದ್ಯಗಳಿಂದ 18 ಶತಕ ಸೇರಿದಂತೆ 5267 ರನ್ ಹಾಗೂ 79 ಟಿ20 ಪಂದ್ಯಗಳಿಂದ ಏಕೈಕ ಶತಕದೊಂದಿಗೆ 2207 ರನ್ ಗಳಿಸಿದ್ದಾರೆ.