VIDEO: ಬಾಲಿವುಡ್​ ಹಾಡಿಗೆ ಡೇವಿಡ್ ವಾರ್ನರ್ ಭರ್ಜರಿ ಸ್ಟೆಪ್ಸ್

david warner for web
Published on

ಬೆಂಗಳೂರು: ಡೇವಿಡ್​ ವಾರ್ನರ್​ ಕ್ರಿಕೆಟ್​ ಬಿಟ್ಟರೆ, ಸಾಮಾಜಿಕ ಜಾಲತಾಣ ಅವರ ಮತ್ತೊಂದು ಫೇವರಿಟ್​. ಟಿಕ್​ ಟಾಕ್​, ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅವರ ಹವ್ಯಾಸವಾಗಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು, ಬಾಲಿವುಡ್​ ಸ್ಟಾರ್​ ಟೈಗರ್​ ಶ್ರಾ್​ ಅವರ ಮುಖವನ್ನು ಸ್ವಾಪ್​ (ಮುಖವಾಡ) ಮಾಡಿ ಸ್ಟೂಡೆಂಟ್​ ಆಫ್​ ದ ಇಯರ್​-2 ಚಿತ್ರದ ಹಾಡಿಗೆ ಸೇರಿಸಿದ್ದಾರೆ. ಬೇಡಿಕೆಯಿಂದ ಮತ್ತೆ ಬಂದಿರುವೆ ಎಂದು ವಿಡಿಯೋ ಸಮೇತ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಆಸೀಸ್​ ತಂಡದ ಮಾಜಿ ಕ್ರಿಕೆಟಿಗ ಬ್ರೇಟ್​ ಲೀ ಸೇರಿದಂತೆ ಹಲವು ಮಂದಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ವಾರ್ನರ್​ ವಿಡಿಯೋಗೆ ಸಾವಿರಾರು ಮಂದಿ ಲೈಕ್​ ನೀಡಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್​ನಿಂದ ಬಿಡುವಿನ ವೇಳೆ ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯ ಕಳೆಯುವ ವಾರ್ನರ್​, ಹೆಂಡತಿ ಮಕ್ಕಳೊಂದಿಗೆ ಸೇರಿ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಐಪಿಎಲ್​ನಲ್ಲಿ ಕಳಪೆ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ವಾರ್ನರ್​ ಅವರನ್ನು ನಾಯಕತ್ವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಇದೀಗ ಯುಎಇಯಲ್ಲಿ ನಿಗದಿಯಾಗಿರುವ ಐಪಿಎಲ್​ ಭಾಗ-2ರಲ್ಲಿ ವಾರ್ನರ್​ ಪಾಲ್ಗೊಳ್ಳುವುದು ಅನುಮಾನ ಮೂಡಿಸಿದೆ.

ವಾರ್ನರ್​ ನಾಯಕತ್ವದಲ್ಲಿ ಸನ್​ರೈಸರ್ಸ್​ ತಂಡ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಸೋತು, ಏಕೈಕ ಗೆಲುವು ಕಂಡಿತು. ವಾರ್ನರ್​ ನಾಯಕತ್ವದಿಂದ ಕೆಳಗಿಳಿದ ಬಳಿಕ ಕೇನ್​ ವಿಲಿಯಮ್ಸನ್​ ನಾಯಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net