

ಆಸ್ಟ್ರೇಲಿಯಾ: ಖ್ಯಾತ ಕ್ರಿಕೆಟ್ ಆಟಗಾರರ ಡೇವಿಡ್ ವಾರ್ನರ್ ಭಾರತ ವಿರುದ್ಧದ ಓವಲ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗಲೇ ತಮ್ಮ ನಿವೃತ್ತಿ ಕುರಿತು ಮಾತನಾಡಿದ್ದಾರೆ.
ಮುಂಬರುವ ಬೇಸಿಗೆಯ ಕೊನೆಯಲ್ಲಿ ತನ್ನ ಸುದೀರ್ಘ ಮತ್ತು ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿರುವುದಾಗಿ ವಾರ್ನರ್ ಬಹಿರಂಗಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ನರ್, ಸಿಡ್ನಿಯಲ್ಲಿನ ತನ್ನ ತವರು ಮೈದಾನದಲ್ಲಿ 2024ರ ಜನವರಿಯಲ್ಲಿ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾದ ಟೆಸ್ಟ್ ಪಂದ್ಯದ ನಂತರ ತನ್ನ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳುವುದಾಗಿ ವಾರ್ನರ್ ಹೇಳಿದ್ದಾರೆ. ಅಲ್ಲದೆ ಮುಂದಿನ ಬಾರಿಯ 2024ರ ವಿಶ್ವಕಪ್ನಲ್ಲಿ ಆಡುವುದಾಗಿಯೂ ತಿಳಿಸಿದ್ದಾರೆ.
ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ, ಡೇವಿಡ್ ವಾರ್ನರ್ ಒಟ್ಟು 103 ಪಂದ್ಯಗಳನ್ನು ಆಡಿ 8,159 ರನ್ ಗಳಿಸಿದ್ದಾರೆ. 25 ಶತಕ ಮತ್ತು 34 ಅರ್ಧಶತಕ ಗಳಿಸಿರುವ ವಾರ್ನರ್ ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ.(ಏಜೆನ್ಸೀಸ್)