

ಹೈದರಾಬಾದ್: ಐಪಿಎಲ್ (IPL)ನಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಭಾರತೀಯರಿಗೆ ತುಂಬಾ ಹತ್ತಿರವಾಗಿದ್ದಾರೆ. ಅದರಲ್ಲೂ ತೆಲುಗು ಜನರಿಗೆ ವಾರ್ನರ್ ಅಂದ್ರೆ ತುಂಬಾ ಇಷ್ಟ. ಏಕೆಂದರೆ, ವಾರ್ನರ್ ಹೈದರಾಬಾದ್ (Hyderabad) ತಂಡದ ಪರ ಆಡಿದ್ದು ಮಾತ್ರವಲ್ಲ, ತೆಲುಗು ಸಿನಿಮಾಗಳ ಹಾಡಿಗೆ ತಮ್ಮ ಕುಟುಂಬದೊಂದಿಗೆ ಹೆಜ್ಜೆ ಹಾಕುವ ಮೂಲಕ ತೆಲುಗು ಮಂದಿಯ ಮನಸ್ಸನ್ನು ಗೆದ್ದಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ (Instagram)ನಲ್ಲಿ ತೆಲುಗು ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವನ್ನು ಆಗಾಗ ವಾರ್ನರ್ ಶೇರ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ನಟರ ಮುಖಕ್ಕೆ ತಮ್ಮ ಮುಖವನ್ನು ಎಡಿಟ್ ಮಾಡಿದ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಂಡಿದ್ದಾರೆ. ಈ ಬಾರಿ ವಾರ್ನರ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಕ್ಷಮೆ ಕೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ರಶ್ಮಿಕಾ ನಟನೆಯ ಭೀಷ್ಮಾ (Bheeshma) ಚಿತ್ರದ ಹಾಡಿಗೆ ವಾರ್ನರ್ ಹೆಜ್ಜೆ ಹಾಕಿದ್ದಾರೆ. ಅಂದರೆ, ನಿಜವಾಗಿಯು ಅಲ್ಲ. ರಶ್ಮಿಕಾ ಅವರ ಮುಖಕ್ಕೆ ತಮ್ಮ ಮುಖವನ್ನು ಎಡಿಟ್ ಮಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ, ನೆಟ್ಟಿಗರು ಫಿದಾ ಸಹ ಆಗಿದ್ದಾರೆ.
ವಿಡಿಯೋ ಪೋಸ್ಟ್ ಮಾಡಿರುವ ವಾರ್ನರ್ ರಶ್ಮಿಕಾರ ಬಳಿ ಕ್ಷಮೆ ಸಹ ಕೋರಿದ್ದಾರೆ. ಈ ವಿಡಿಯೋ ಮಾಡಿದ್ದಕ್ಕಾಗಿ ಕ್ಷಮೆ ಇರಲಿ ಎಂದಿದ್ದಾರೆ. ಸದ್ಯ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. 17 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ರಶ್ಮಿಕಾ ಏನೆಂದು ಕಾಮೆಂಟ್ ಮಾಡಲಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸುವುದನ್ನು ಮರೆಯಬೇಡಿ. (ಏಜೆನ್ಸೀಸ್)