VIDEO: ಬಾಂಗ್ರಾ ನೃತ್ಯಕ್ಕೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್ ದಂಪತಿ

david warner_WEB
Published on

ಮೆಲ್ಬೋರ್ನ್: ಲಾಕ್‌ಡೌನ್ ದಿನಗಳನ್ನು ಮನರಂಜನಾತ್ಮಕವಾಗಿ ಕಳೆಯುತ್ತಿರುವ ವಿಶ್ವದ ಏಕೈಕ ಕ್ರಿಕೆಟಿಗ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್. ಪತ್ನಿಯೊಂದಿಗೆ ಭಾರತೀಯ ಮೂಲದ ಹಾಡುಗಳಿಗೆ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ತೆಲುಗು ಚಿತ್ರಗಳ ಹಾಡು, ಡೈಲಾಗ್‌ಗಳಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ವಾರ್ನರ್ ಕನ್ನಡ ಹಾಗೂ ತಮಿಳು ಹಾಡುಗಳಿಗೆ ಹೆಜ್ಜೆ ಹಾಕಿದುಂಟು. ಇದೀಗ ಪಂಜಾಬಿ ಹಾಡಿಗೂ ತಮ್ಮ ಪತ್ನಿಯೊಂದಿಗೆ ವಾರ್ನರ್ ಹೆಜ್ಜೆಹಾಕಿದ್ದಾರೆ.

ಪತಿ ಡೇವಿಡ್ ವಾರ್ನರ್‌ಗೆ ಪತ್ನಿ ಕ್ಯಾಂಡೈಸ್ ಕೂಡ ಸಾಥ್ ನೀಡುತ್ತಾರೆ ಬಂದಿದ್ದಾರೆ. ಪಂಜಾಬ್ ಬಾಂಗ್ರಾ ಎಂದು ಹ್ಯಾಷ್‌ಟ್ಯಾಗ್ ಮಾಡಿರುವ ವಾರ್ನರ್, ಮುಂದೆ ನಾವು ಏನು ಮಾಡಬಹುದು ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ನಾಯಕನಾಗಿರುವ ಡೇವಿಡ್ ವಾರ್ನರ್, ಐಪಿಎಲ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು. ಕರೊನಾ ವೈರಸ್ ಭೀತಿಯಿಂದಾಗಿ ಅನಿರ್ದಿಷ್ಟಾವಧಿವರೆಗೆ ಐಪಿಎಲ್ ಮುಂದೂಡಿಕೆಯಾಗಿದ್ದರೆ, ಟಿ20 ವಿಶ್ವಕಪ್ ಕೂಡ ಅನಿಶ್ಚಿತತೆಯಲ್ಲಿ ಮುಳುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net