ಹೆಲಿಕಾಪ್ಟರ್ ಮೂಲಕ ಸಿಡ್ನಿ ಮೈದಾನಕ್ಕೆ ಆಗಮಿಸಿದ ಡೇವಿಡ್​ ವಾರ್ನರ್

warner
Published on

ನವದೆಹಲಿ: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಸಿಡ್ನಿ ಥಂಡರ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವಣ ಬಿಗ್ ಬ್ಯಾಷ್‌ ಲೀಗ್‌ ಪಂದ್ಯವಾಡಲು ವಾರ್ನರ್ ಹೆಲಿಕಾಪ್ಟರ್ ಮೂಲಕ ನೇರವಾಗಿ ಸಿಡ್ನಿ ಮೈದಾನಕ್ಕೆ ಬಂದಿಳಿದಿದ್ದಾರೆ.

ಹಂಟರ್ ವ್ಯಾಲಿಯಲ್ಲಿ ನಡೆದ ತನ್ನ ಸಹೋದರ ಮದುವೆಯಲ್ಲಿ ಭಾಗವಹಿಸಿ ನೇರವಾಗಿ ಸಿಡ್ನಿಯ ಮೈದಾನದಲ್ಲಿ ತನ್ನ ಹೆಲಿಕಾಪ್ಟರ್ ಬಂದಿಳಿದರು. ಸಿಡ್ನಿ ಥಂಡರ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವಿನ ಪಂದ್ಯ ಭಾರತೀಯರ ಕಾಲಮಾನ ಮಧ್ಯಾಹ್ನ 1.45 ಇಂದು ಶುರುವಾಗಲಿದೆ.

ಬಿಗ್ ಬ್ಯಾಷ್ ಲೀಗ್‌ನ ಪ್ರಸಕ್ತ ಋತುವಿನಲ್ಲಿ ಸಿಡ್ನಿ ಥಂಡರ್ಸ್ ತಂಡ 7 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಸೋತಿದೆ. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಸಿಡ್ನಿ ಥಂಡರ್‌ಗೆ ನಾಕೌಟ್ ಹಂತ ತಲುಪುವುದು ಸುಲಭವಲ್ಲ. ಆದರೆ ಆರಂಭಿಕ ಬ್ಯಾಟ್ಸ್​ಮನ್​ ವಾರ್ನರ್ ಆಗಮನದ ಬಳಿಕ ಸಿಡ್ನಿ ಥಂಡರ್‌ ಮಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬಹುದು ಎನ್ನಲಾಗಿದೆ.

ಡೇವಿಡ್‌ ವಾರ್ನರ್‌ ಅವರು ಇತ್ತೀಚೆಗೆ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಪಾಕಿಸ್ತಾನ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ ಬಳಿಕ ವಾರ್ನರ್‌ ಅವರು ದೀರ್ಘಾವಧಿ ಸ್ವರೂಪಕ್ಕೆ ಗುಡ್‌ಬೈ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net