

ಬೆಂಗಳೂರು: ಬಹುನಿರೀತ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಗೆ ಆಗಸ್ಟ್ ಅಂತ್ಯದಲ್ಲಿ ಚಾಲನೆ ಸಿಗುವ ಸಾಧ್ಯತೆಗಳಿವೆ. ಆಗಸ್ಟ್ 29ರಂದು ಟೂರ್ನಿ ಶುರುವಾಗುವ ನಿರೀಕ್ಷೆ ಇದ್ದು, ನಿಖರ ದಿನಾಂಕ ಇನ್ನಷ್ಟೇ ಅಂತಿಮವಾಗಬೇಕಿದೆ. ಕಳೆದ ಮೇನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿತ್ತು. ಸದ್ಯ ಎಲ್ಲ 12 ತಂಡಗಳು ವಿವಿಧ ಸ್ಥಳಗಳಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು, ಟೂರ್ನಿಯ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಈ ಬಾರಿ ಒಟ್ಟು 6 ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ.
ಬೆಂಗಳೂರು, ವಿಶಾಖಪಟ್ಟಣ, ಜೈಪುರ, ಚೆನ್ನೈ, ನವದೆಹಲಿ ಮತ್ತು ಮುಂಬೈ ಈ 6 ತಾಣಗಳಾಗಿವೆ. ಬೆಂಗಳೂರು ಅಥವಾ ವಿಶಾಖಪಟ್ಟಣದಲ್ಲಿ ಟೂರ್ನಿಯ ಮೊದಲ ಚರಣ ನಡೆಯುವ ಸಾಧ್ಯತೆಗಳಿವೆ. ಈ ಸಂಬಂಧ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಹಸಿರು ನಿಶಾನೆ ಸಿಕ್ಕ ಬೆನ್ನಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ. ಕಳೆದ ಆವೃತ್ತಿಯಲ್ಲಿ ಹೈದರಾಬಾದ್, ನೋಯ್ಡಾ, ಹೈದರಾಬಾದ್ನಲ್ಲೇ ಟೂರ್ನಿಯ ಎಲ್ಲ 137 ಪಂದ್ಯಗಳು ನಡೆದಿದ್ದವು. ಈ ಬಾರಿ ಟೂರ್ನಿಗೆ ಇನ್ನಷ್ಟು ಹೊಸತನ ನೀಡುವ ಮತ್ತು ಕುತೂಹಲಕಾರಿ ಆಗಿಸುವ ನಿಟ್ಟಿನಲ್ಲಿ ಪಂದ್ಯದ ದಿನದ ಸ್ವರೂಪ ಬದಲಾವಣೆ ಕಾಣುವ ನಿರೀೆ ಇದೆ. ಜತೆಗೆ ಹೆಚ್ಚಿನ ತಂತ್ರಜ್ಞಾನಗಳ ಬಳಕೆಯನ್ನೂ ಮಾಡಲಾಗುತ್ತದೆ ಎನ್ನಲಾಗಿದೆ.