ಟಿ10 ಕ್ರಿಕೆಟ್​ ಲೀಗ್​ನಲ್ಲಿ 3 ಎಸೆತಗಳಲ್ಲಿ 30 ರನ್​ ಬಿಟ್ಟುಕೊಟ್ಟ ದಸುನ್​ ಶನಕ!

web shanaka
Published on

ಅಬುಧಾಬಿ: ಶ್ರೀಲಂಕಾದ ಮಾಜಿ ನಾಯಕ ದಸುನ್​ ಶನಕ ಅಬುಧಾಬಿ ಟಿ10 ಲೀಗ್​ನಲ್ಲಿ ಬಾಂಗ್ಲಾ ಟೈಗರ್ಸ್​ ತಂಡದ ಪರ ಡೆಲ್ಲಿ ಬುಲ್ಸ್​ ವಿರುದ್ಧದ ಪಂದ್ಯದಲ್ಲಿ ಕೇವಲ 3 ಕ್ರಮಬದ್ಧ ಎಸೆತಗಳಲ್ಲೇ 30 ರನ್​ ಬಿಟ್ಟುಕೊಟ್ಟಿದ್ದಾರೆ.

ಪಂದ್ಯದ 9ನೇ ಓವರ್​ ಎಸೆದ ಶನಕ, ಮೊದಲ 4 ಎಸೆತಗಳಲ್ಲಿ ಬೌಂಡರಿ ಬಿಟ್ಟುಕೊಟ್ಟರು. ಈ ಪೈಕಿ 2 ನೋಬಾಲ್​ ಆಗಿತ್ತು. 3ನೇ ಎಸೆತದಲ್ಲಿ ಸಿಕ್ಸರ್​ ಬಿಟ್ಟುಕೊಟ್ಟರು. 4ನೇ ಕ್ರಮಬದ್ಧ ಎಸೆತಕ್ಕೆ ಮುನ್ನ ಮತ್ತೆ 2 ನೋಬಾಲ್​ ಎಸೆದ ಶನಕ, ಈ ಪೈಕಿ ಒಂದು ಬೌಂಡರಿ ನೀಡಿದರು. ಇದರಿಂದಾಗಿ ಓವರ್​ನ 4ನೇ ಕ್ರಮಬದ್ಧ ಎಸೆತಕ್ಕೆ ಮುನ್ನ ಅವರು 30 ರನ್​ ಬಿಟ್ಟುಕೊಟ್ಟಂತಾಯಿತು. ಆ ಓವರ್​ನಲ್ಲಿ ಅವರು ಒಟ್ಟು 33 ರನ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net