

ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಗಳು ರದ್ದಾಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳು ತೀವ್ರ ನಿರಾಸೆಯಾಗಿದ್ದಾರೆ. ಅದರಲ್ಲೂ ಆರ್ಸಿಬಿ ಅಭಿಮಾನಿಗಳಂತೂ ಶಾಕ್ಗೆ ಒಳಗಾಗಿದ್ದಾರೆ. ಈ ಸಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಆರ್ಸಿಬಿ ಕಪ್ ಗೆಲ್ಲುವ ಹಾಟ್ ಫೇವರಿಟ್ ಆಗಿತ್ತು.
ಆದರೆ, ಟೂರ್ನಿ ರದ್ದಾಗಿರುವುದರಿಂದ ಎಲ್ಲರೂ ಅವರವರ ಮನೆಗೆ ತೆರಳುವ ಸಿದ್ದತೆಯಲ್ಲಿದ್ದಾರೆ. ಇತ್ತ ತನ್ನ ಆಟಗಾರರಿಗೆ ಆರ್ಸಿಬಿ ಬಿಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿ ಬೇಸರಿದಿಂದ ಬಿಳ್ಕೊಟ್ಟಿದೆ.
ಇದೇ ವೇಳೆ ಎಂದಿನಂತೆ ಆರ್ಸಿಬಿ ಆಟಗಾರರ ಜೊತೆಗಿದ್ದು ನಗಿಸುತ್ತಾ ಚೀಯರ್ ಹೇಳುವ ನಟ ಡ್ಯಾನಿಶ್ ಶೇಟ್ ಅವರು ಸ್ಪೋಟಕ ಬ್ಯಾಟ್ಸಮನ್ ಮ್ಯಾಕ್ಸವೆಲ್ ಬಳಿ ಶಿವಣ್ಣ ಅಭಿನಯದ ಜೋಗಿ ಚಿತ್ರದ 'ಹೊಡಿ ಮಗ ಹೊಡಿ ಮಗ' ಹಾಡು ಹೇಳಿಸಿದ್ದಾರೆ.
ಈ ಹಾಡನ್ನು ಹೇಳಲು ಆರಂಭದಲ್ಲಿ ಮ್ಯಾಕ್ಸವೆಲ್ ಕಷ್ಟಪಟ್ಟರೂ ಆಮೇಲೆ ಸಾರಾಗವಾಗಿ ಹಾಡು ಹೇಳಿದ್ದಾರೆ. ಅಲ್ಲದೇ ಅದು ನಮ್ಮ ಶಿವಣ್ಣನ ಸಾಂಗ್ ಎಂದು ಹೇಳಿ ಸಂಭ್ರಮಪಟ್ಟಿದ್ದಾರೆ. ಟ್ವಿಟ್ಟರ್ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿದೇಶಿಗರಿಗೆ ತಮ್ಮ ವಿಶಿಷ್ಠ ಶೈಲಿಯಿಂದ ಕನ್ನಡ ಕಲಿಸುವ ಡ್ಯಾನಿಶ್ ಶೇಟ್ ಅವರಿಗೆ ಕನ್ನಡಿಗರು ಜೈ ಅಂದಿದ್ದಾರೆ.