

Danish Kaneria: ಇತ್ತೀಚಿನ ಭಾರತ-ಪಾಕ್ ನಡುವಿನ ಉದ್ವಿಗ್ನತೆಯ ಬೆನ್ನಲ್ಲೇ ಇದೀಗ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಿಂದ ಪಾಕಿಸ್ತಾನ ಕ್ರಿಕೆಟ್ನ ಹಿರಿಯ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರ ಫೋಟೋವನ್ನು ತೆಗೆದುಹಾಕಲಾಗಿದೆ.
ಪಾಕ್ ಪರ 61 ಟೆಸ್ಟ್ ಮತ್ತು 18 ಏಕದಿನ ಪಂದ್ಯಗಳನ್ನು ಆಡಿರುವ ಡ್ಯಾನಿಶ್, 261 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 15 ಬಾರಿ ಐದು ವಿಕೆಟ್ ಪಡೆದಿದ್ದರೆ, ಎರಡು ಬಾರಿ ಹತ್ತು ವಿಕೆಟ್ ಕಬಳಿಸಿ, ದಾಖಲೆ ಬರೆದಿದ್ದಾರೆ. ಭಾರತ ಎದುರು 11 ಟೆಸ್ಟ್‌ಗಳಲ್ಲಿ 44 ವಿಕೆಟ್‌ಗಳನ್ನು ಪಡೆದಿರುವ ಕನೇರಿಯಾ ಅವರ ಫೋಟೋವನ್ನು ಜೈಪುರ ಕ್ರಿಕೆಟ್ ಸ್ಟೇಡಿಯಂನಿಂದ ಹೊರಗಿಡಲಾಗಿದೆ. ಇದಕ್ಕೆ ಬಲವಾದ ಕಾರಣ ಎರಡೂ ದೇಶಗಳ ನಡುವಿನ ಇತ್ತೀಚಿನ ಬೆಳವಣಿಗೆಗಳು ಎಂದು ವರದಿ ಉಲ್ಲೇಖಿಸಿದೆ.
ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮೌನ ಮುರಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಕನೇರಿಯಾ ತಮ್ಮ ಕ್ರಿಕೆಟ್ ದಿನಗಳಲ್ಲಿ ತಾವು ಎದುರಿಸಿದ ತಾರತಮ್ಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಪಾಕ್ ತಂಡದ ಪರ ಆಡುತ್ತಿದ್ದಾಗ ತನ್ನನ್ನು ಬೆಂಬಲಿಸಿದ್ದು ಇಂಜಮಾಮ್ ಉಲ್ ಹಕ್ ಮಾತ್ರ. ಇದೇ ಶಾಹಿದ್ ಅಫ್ರಿದಿ ತನ್ನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ,(ಏಜೆನ್ಸೀಸ್).